ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿಗರ ಜೇಬಿಗೆ ಮತ್ತೊಂದು ಕತ್ತರಿ ! ಅಗತ್ಯ ವಸ್ತುಗಳ, ಸೇವೆಗಳ ಬೆಲೆ ಹೆಚ್ಚಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಕಾವೇರಿ ನೀರಿನ ದರ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಮತ್ತೊಂದು ಹೊರೆ ಹೊರೆಸಿದೆ. ಅಂದು ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ಸರ್ಕಾರ, ಇಂದು ಬೆಂಗಳೂರಿನ ಜನತೆಗೆ ದರ ಏರಿಕೆಯ ಬರೆ ಎಳೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದರು.
ರಾಜ್ಯದ ಖಜಾನೆಯನ್ನೆಲ್ಲಾ ಲೂಟಿ ಹೊಡೆದ ಸರ್ಕಾರ ಇದೀಗ ಮಂಡಳಿಗಳ ಖರ್ಚು ಸರಿದೂಗಿಸಲು ಜನರ ಮೇಲೆ ‘ದರ ಏರಿಕೆಯ ಹೊರೆ‘ ಹೇರುತ್ತಿದೆ.
ಮುಂದಿನ ದಿನಗಳಲ್ಲಿ ತುಘಲಕ್ ಸಿದ್ದರಾಮಯ್ಯ ಸರ್ಕಾರವು ಜನರು ಉಸಿರಾಡುವ ಗಾಳಿ ಮೇಲೆಯೂ ತೆರಿಗೆ ಹಾಕಿದರು ಅಚ್ಚರಿಯಿಲ್ಲ! ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.