ಜನರನ್ನು ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಮಾರ್ಟ್ ಮೀಟರ್‌ಹೆಸರಲ್ಲಿ ರಾಜ್ಯದ ಜನರನ್ನು ಲೂಟಿ ಹೊಡೆಯುತ್ತಿದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ. ಬೇರೆ ರಾಜ್ಯಗಳಲ್ಲಿ ಕೇವಲ
900ಕ್ಕೆ ದೊರೆಯುವ ಸ್ಮಾರ್ಟ್ ಮೀಟರ್‌ಗಳಿಗೆ ರಾಜ್ಯದಲ್ಲಿ 8510 ಫಿಕ್ಸ್ ಮಾಡಲಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್‌ಟೆಂಡರ್‌ನಲ್ಲಿ ಸುಮಾರು ರೂ. 15,568 ಕೋಟಿ ಬೃಹತ್ ಮೊತ್ತದ ಅವ್ಯವಹಾರ ನಡೆದಿದೆ. ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ ನಿಯಮಾವಳಿ ಪ್ರಕಾರವೂ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ. ಕೆಇಆರ್‌ಸಿ ನಿಯಮಾವಳಿಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ. ಆದರೂ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಯ ಮೇಲೆ ಸ್ಮಾರ್ಟ್ ಮೀಟರ್ ಹೊರೆ ಏರಿಸಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ಕೆಟಿಪಿಪಿ ಕಾಯ್ದೆ ಪ್ರಕಾರ ಬಿಡ್ ಪಡೆಯುವ ಕಂಪನಿ ವ್ಯವಹಾರ ರೂ.1,920 ಕೋಟಿ ಇರಬೇಕು. ಆದರೆ, ಟೆಂಡರ್‌ನಲ್ಲಿ ಕೇವಲ ರೂ.107 ಕೋಟಿ ನಮೂದಿಸಲಾಗಿದೆ. ಕಪ್ಪುಪಟ್ಟಿಯಲ್ಲಿರುವ ಬಿಸಿಐಟಿಎಸ್ ಕಂಪನಿಯನ್ನು ಈ ಟೆಂಡ‌ರ್ ನಲ್ಲಿ ನಿಯಮಬಾಹಿರವಾಗಿ ಪರಿಗಣಿಸಿದ್ದಾರೆ. ಈ ಅಕ್ರಮದಲ್ಲಿ ಸರ್ಕಾರಕ್ಕೆ ಎಷ್ಟು ಪರ್ಸೇಂಟೇಜ್  ಕಮಿಷನ್ ಎಂಬ ಸತ್ಯವನ್ನು ಟಿ.ಕೆ ಜಾರ್ಜ್  ಅವರು ತಿಳಿಸಬೇಕು‌. ರಾಜ್ಯ ಸರ್ಕಾರ ಈ ಕೂಡಲೇ ಸ್ಮಾರ್ಟ್ ಮೀಟರ್ ಟೆಂಡ‌ರ್ ಪ್ರಕ್ರಿಯೆ ರದ್ದು ಮಾಡಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ‌

 

 

Share This Article
error: Content is protected !!
";