ಕನ್ನಡಿಗರಿಗೆ ದ್ರೋಹ ಬಗೆದು ತೆಲಂಗಾಣ ಮತ್ತು ತಮಿಳುನಾಡಿಗೆ ನೀರು ಹರಿಸಿದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತನ್ನ ಇಂಡಿ ಮಿತ್ರ ಪಕ್ಷ ಡಿಎಂಕೆ ಮೆಚ್ಚಿಸಲು ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾತ್ರೋರಾತ್ರಿ ತೆಲಂಗಾಣ ರಾಜ್ಯದ ಮೇಲೆ ಪ್ರೇಮಾಂಕುರವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

ವಿಜಯಪುರದ ಆಲಮಟ್ಟಿ ಜಲಾಶಯದಿಂದ ಫೆಬ್ರವರಿ 20 ಮತ್ತು 21 ರಂದು ತೆಲಂಗಾಣ ರಾಜ್ಯಕ್ಕೆ 1.27 ಟಿಎಂಸಿ ಅಡಿ ನೀರನ್ನ  ಉಡುಗೊರೆಯಾಗಿ ನೀಡಿದೆ. ತೆಲಂಗಾಣ ಮತ್ತು ತಮಿಳುನಾಡಿನ ಬಗ್ಗೆ ರಾಜ್ಯ ಸರ್ಕಾರದ ಒಲವು ಮತ್ತೊಮ್ಮೆ ಕನ್ನಡಿಗರಿಗೆ ದ್ರೋಹ ಬಗೆದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ರೈತರಿಗೆ ನೀರು ಬಿಡುವಲ್ಲಿ ಒಂದು ಸೆಕೆಂಡ್ ಕೂಡಾ ಹೆಚ್ಚಾಗದಂತೆ ಸಮಯ ಪಾಲನೆ ಮಾಡುವ ಅಧಿಕಾರಿಗಳು ಇದಕ್ಕೆ ಏನ್ ಹೇಳ್ತಾರೆ.?

ರಾಜ್ಯದ ಜನತೆಗೆ ಮುಂದೆ ಕುಡಿಯುವ ನೀರು ಮತ್ತು ಬೇಸಿಗೆ ಬೆಳೆಗೆ ನೀರಿನ ಕೊರತೆಯಾದರೆ ಯಾರನ್ನ ದೂಷಿಸುವಿರಿ.? ಈ ಸರಕಾರಕ್ಕೆ ರೈತರ ಶಾಪವಂತೂ ತಟ್ಟುವದು ಶತ ಸಿದ್ಧ.! ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

 

Share This Article
error: Content is protected !!
";