ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವು ಕೊಟ್ಟ ಕಾಂಗ್ರೆಸ್‌ಸರ್ಕಾರ !

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವು ಕೊಟ್ಟ ಕಾಂಗ್ರೆಸ್‌ಸರ್ಕಾರ ! ಎಂದು ಜೆಡಿಎಸ್ ಹರಿಹಾಯ್ದಿದೆ.
ಜನವಿರೋಧಿ ಕರ್ನಾಟಕ ಕಾಂಗ್ರೆಸ್
ಸರ್ಕಾರಕ್ಕೆ ಧಿಕ್ಕಾರ ! ,

ನಂದಿನ ಹಾಲು, ಮೊಸರು ಲೀಟರ್‌ಗೆ 4 ದರ ಏರಿಸಿದ ಬೆನ್ನಲ್ಲೇ ವಿದ್ಯುತ್‌ದರವನ್ನು ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿರುವ, ಜನವಿರೋಧಿ ಸಿದ್ದರಾಮಯ್ಯ ಸರ್ಕಾರ ಬಡ ಜನರ ಹೊಟ್ಟೆಯ ಮೇಲೆ ಹೊಡೆದಿದೆ ಎಂದು ಜೆಡಿಎಸ್ ದೂರಿದೆ.  

- Advertisement - 

ವಿದ್ಯುತ್‌ಯುನಿಟ್‌ಗೆ 36 ಪೈಸೆ ಹೆಚ್ಚಳ, ಹಾಲಿನ ದರ ಲೀ. 4 ಏರಿಕೆ, ಮೊಸರಿನ ದರ ಲೀ. 4 ಏರಿಕೆ, ಬಸ್, ಮೆಟ್ರೋ , ನೀರು ಸೇರಿದಂತೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ, ಕಾಂಗ್ರೆಸ್‌ಸರ್ಕಾರ ಹಾಲು, ಮೊಸರು ಮತ್ತು ವಿದ್ಯುತ್‌ದರವನ್ನು  ಒಟ್ಟೊಟ್ಟಿಗೆ ಏರಿಸಿ ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವನ್ನು ಊಡುಗೊರೆಯಾಗಿ ನೀಡಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.

 

- Advertisement - 

 

Share This Article
error: Content is protected !!
";