ಸಿಎಂ, ಡಿಸಿಎಂ ಆದಿಯಾಗಿ ಶೇ 60 ರಷ್ಟು ಕಮಿಷನ್ ಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರ ನೇತೃತ್ವದ ರಾಜ್ಯ ಕಾಂಗ್ರೆಸ್‌ಸರ್ಕಾರ 60% ಕಮಿಷನ್ ಸರ್ಕಾರ ಎಂದು ಮತ್ತೆ ಸಾಬೀತಾಗಿದೆ. ಗುತ್ತಿಗೆದಾರರ ಸಂಘ ನೇರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಲೆ ಕಮಿಷನ್‌ಆರೋಪ ಮಾಡಿದೆ ಎಂದು ಬಿಜೆಪಿ ದೂರಿದೆ.

ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್‌ಆರೋಪದ ಸುಳ್ಳು ನರೇಟಿವ್‌ಸೃಷ್ಟಿಸಿದ್ದ ಕಾಂಗ್ರೆಸ್‌ಈಗ 60% ಕಮಿಷನ್‌ಪೀಕುತ್ತಿರುವ ಬಗ್ಗೆ ಗುತ್ತಿಗೆದಾರರು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ ಕಮಿಷನ್‌ಆರೋಪವನ್ನು ನ್ಯಾಯಾಲಯ ಕೂಡಾ ತಳ್ಳಿ ಹಾಕಿತ್ತು ಎಂದು ಬಿಜೆಪಿ ತಿಳಿಸಿದೆ.

- Advertisement - 

ಮುಖ್ಯಮಂತ್ರಿ ಆದಿಯಾಗಿ ಡಿಸಿಎಂ, ಸಚಿವರು, ಕಾಂಗ್ರೆಸ್ ಶಾಸಕರು ಎಲ್ಲರೂ‌ಕೂಡಾ ಈಗ 60% ಕಮಿಷನ್‌ಬಾಚಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿ, ಕರ್ನಾಟಕ ಹತ್ತು ವರ್ಷದಷ್ಟು ಹಿಂದಕ್ಕೆ ಸರಿದಿದೆ ಎನ್ನುವಂತೆ ಭಾಸವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಯಾವ ನೈತಿಕತೆ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದೀರಿ ಕರ್ನಾಟಕ ಕಾಂಗ್ರೆಸ್ಸಿನವರೇ ಎಂದು ಬಿಜೆಪಿ ಪ್ರಶ್ನಿಸಿದೆ?

 

- Advertisement - 

 

 

Share This Article
error: Content is protected !!
";