ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜನರಿಗೆ ಸುಳ್ಳುಗಳ ಮೂಲಕ ಅಂಗೈನಲ್ಲಿ ಆಕಾಶ ತೋರಿಸಿ ಅಧಿಕಾರ ಹಿಡಿದ ಕರ್ನಾಟಕ ಕಾಂಗ್ರೆಸ್ ಪಕ್ಷ ನೀಡಿದ್ದ 134 ಭರವಸೆಗಳಲ್ಲಿ ಕಳೆದ 2.5 ವರ್ಷಗಳಲ್ಲಿ ಈಡೇರಿಸಿದ್ದು ಕೇವಲ 9 ಅಷ್ಟೇ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಕಾಂಗ್ರೆಸ್‌ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿಗಳ ಹೊಡೆತಕ್ಕೆ ರಾಜ್ಯದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಸರ್ಕಾರಿ ನೌಕರರಿಗೆ, ಪಾಲಿಕೆ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ, ಶಿಕ್ಷಕರಿಗೆ ವೇತನ ನೀಡಲು ಸಹ ಸರ್ಕಾರ ಹೆಣಗಾಡುತ್ತಿದೆ.
“ವಚನ ಭ್ರಷ್ಟ ಕಾಂಗ್ರೆಸ್” ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ನಂಬರ್ ಆಗಿಸಿದ್ದೇ 2.5 ವರ್ಷಗಳ ಸಾಧನೆಯಾಗಿದೆ. ಜಿಬಿಎ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ರಾಜ್ಯದ ಜನರ ಹಕ್ಕನ್ನು ಕಸಿದಿರುವ ಕಾಂಗ್ರೆಸ್‌ಕೊಟ್ಟಿದ್ದ ಭರವಸೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಲ್ಲಿ ಸೋತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಇಲಾಖೆಗಳಲ್ಲಿ 60% ಕಮಿಷನ್, ಲಂಚ, ಅಧಿಕಾರ ದಾಹ , ಕುರ್ಚಿ ಕಚ್ಚಾಟದಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಮುಳುಗಿಹೋಗಿದ್ದು, ಆಡಳಿತ ಯಂತ್ರ ಸಂಪೂರ್ಣ ನೆಲಕ್ಕಚ್ಚಿದೆ.
ನೆರೆಹಾನಿ, ರೈತರ ಆತ್ಮಹತ್ಯೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್‌ಸರ್ಕಾರ ವಿಫಲವಾಗಿದೆ ಎಂದು ಜೆಡಿಎಸ್ ದೂರಿದೆ.

