ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಶುಕ್ರವಾರ, ಶನಿವಾರ ಸುರಿದ ಮಳೆಗೆ ಜನರು, ವ್ಯಾಪಾರಸ್ಥರು, ರೈತರು ತತ್ತರಿಸಿದ್ದಾರೆ. ದಸರಾ ಹಬ್ಬದ ಆಯುಧ ಪೂಜೆ ಖುಷಿಯಲ್ಲಿದ್ದ ವ್ಯಾಪಾರಸ್ಥರಿಗೆ ವರುಣರಾಯ ಬಿಗ್ ಶಾಕ್ ನೀಡಿದಂತು ಸತ್ಯ. ನಗರದ ಬೆಂಗಳೂರು ರಸ್ತೆಯ ಸುಮಾರು ಹತ್ತುಹೆಚ್ಚು ಬಟ್ಟೆ ಅಂಗಡಿ, ಕೋರಿಯರ್ ಸೆಂಟರ್, ಗೊಬ್ಬರ ಅಂಗಡಿ, ದಿನಸಿ, ಕ್ಲಿನಿಕ್ ಗಳಿಗೆ ಶುಕ್ರವಾರ ರಾತ್ರಿ ಸುರಿದ ಮಳೆ ಕೆಳಮಳಿಗೆಗಳಿಗೆ ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿಹೋಗಿದ್ದವು.
ಹಬ್ಬದ ದಿನವೂ ವ್ಯಾಪಾರವಹಿವಾಟು ಇಲ್ಲದೆ ದಿನವಿಡಿ ಅಂಗಡಿಯಲ್ಲಿ ತುಂಬಿದ್ದ ನೀರು ಹೋರಹಾಕಿದರು. ಶುಕ್ರವಾರ ರಾತ್ರಿ ಇಡೀ ಅಂಗಡಿ ಮಾಲೀಕರೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಅಂಗಡಿಯಲ್ಲಿ ತುಂಬಿದ್ದ ನೀರನ್ನು ಮೋಟರ್ ಸಹಾಯದಿಂದ ಹೊರಹಾಕಿದರು.
ಇದಲ್ಲದೆ ಮೈರಾಡ ಕಾಲೋನಿ, ಅಭಿ?ಕ್ ನಗರ, ಶಾಂತಿನಗರ, ರಹೀಂನಗರದ ಸುಮಾರು ೫೦ಕ್ಕೂಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ನೀರಿನಲ್ಲಿ ಮುಳುಗಿದ್ದವು. ಮನೆಯೊಳಗೆ ನುಗ್ಗಿದ ಮಳೆನೀರನ್ನು ಇಡೀರಾತ್ರಿ ಹೊರಹಾಕಿದ್ದು ಕಂಡುಬಂತು. ಮೈರಾಡ ಕಾಲೋನಿ ನಿವಾಸಿಗಳು ಪ್ರತಿಮಳೆಗೂ ನಮಗೆ ಇದೇ ಸ್ಥಿತಿ ಉಂಟಾಗುತ್ತಿದೆ ಶಾಶ್ವತ ಪರಿಹಾರ ತೋರಿಸಿ ಎಂದು ಮನವಿ ಮಾಡಿದರು.
ನಗರದ ಮಾತ್ರವಲ್ಲದೆ ಗ್ರಾಮೀಣ ಭಾಗದ ಜಮೀನುಗಳಿಗೆ ನೀರು ನುಗ್ಗಿ ಕೈಗೆ ಬಂದಿದ್ದ ಫಸಲು ನೀರುಪಾಲಾಗಿ ಲಕ್ಷಾಂತರ ರೂ ನ? ಸಂಭವಿಸಿದೆ. ತಾಲ್ಲೂಕಿನ ನಗರಂಗೆರೆ, ರೇಖಲಗೆರೆ, ಎನ್.ದೇವರಹಳ್ಳಿ ಕೆರೆಗಳು ಕೋಡಿಬಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ. ಹಲವಾರು ವ?ಗಳಿಂದ ನೀರೇ ಕಾಣದ ಕೆರೆಕಟ್ಟೆಗಳು ಈ ಬಾರಿಯ ಮಳೆಗೆ ತುಂಬಿ ಜಲಕಳೆತಂದುಕೊಂಡಿವೆ.
ಶುಕ್ರವಾರ ಬೆಳಗಿನ ಜಾವ ನಾಯಕನಹಟ್ಟಿ-೯೦.೦೬, ಚಳ್ಳಕೆರೆ-೮೮.೦೪, ದೇವರಮರಿಕುಂಟೆ-೩೮.೦೮, ಪರಶುರಾಮಪುರ-೩೭.೦೮, ತಳಕು-೩೭.೦೪ ಒಟ್ಟು ೨೯೧.೧೦ ಎಂ.ಎಂ ಮಳೆಯಾಗಿದೆ. ತಾಲ್ಲೂಕಿನ ನಗರಂಗೆರೆ ಪಂಚಾಯಿತಿ ವ್ಯಾಪ್ತಿಯ ದಾಸನಾಯಕಹಟ್ಟಿಯಲ್ಲಿ ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ ರಿ.ಸರ್ವೆ, ನಂ. ೫೪/೨ರಲ್ಲಿದ್ದ ಶೇಂಗಾ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಸುಮಾರು ೫೦ ಸಾವಿರ ನಷ್ಟ ಸಂಭವಿಸಿದೆ.
ವರವು ಗ್ರಾಮದ ಕನ್ನಯ್ಯ ಎಂಬುವವರ ಜಮೀನಿನಲ್ಲಿದ್ದ ಮೂರು ಎಕರೆ ಮೆಕ್ಕೆಜೋಳ ನೀರಿನಲ್ಲಿ ಮುಳುಗಿದೆ. ವರವು ಗ್ರಾಮದ ಪಾಲಯ್ಯ ಮತ್ತು ಸಣ್ಣಬೋರಮ್ಮ ಎಂಬುವವರ ರಿ.ಸರ್ವೆ, ನಂ. ೬೩/೧೦ರಲ್ಲಿದ್ದ ಟಮೋಟೊ ಬೆಳೆ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಬಂಜಿಗೆರೆ ಗ್ರಾಮದ ಬಸಮ್ಮ ಎಂಬುವವರ ವಾಸದ ಮನೆಯ ಮೇಲ್ಚಾವಣಿ ಕುಸಿದು ೩೫ ಸಾವಿರ ನಷ್ಟ ಸಂಭವಿಸಿದೆ. ನೀರು ನುಗ್ಗಿದ ಪ್ರದೇಶಗಳಿಗೆ ತಹಶೀಲ್ಧಾರ್ ರೇಹಾನ್‌ಪಾಷ ತಮ್ಮ ಸಿಬ್ಬಂದಿಯೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.