ನ್ಯಾಯಾಲಯದ ತೀರ್ಪು ಸ್ವಾಗತಾರ್ಹ-ನಂದಿಗುಂದ ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅದಿಕಾರ ಮತ್ತು ಹಣ ಮದದಿಂದ ಎಷ್ಟೇ ಅಕ್ರಮ ಅನ್ಯಾಯ ಮಾಡಿದರು
  ಕಾನೂನಿನಿಂದ ತಪ್ಪಿಸಿಕೊಳ್ಳಬಹುದೆಂಬ ಅಹಂಕಾರದಿಂದ ಮೆರೆದ ಪ್ರಜ್ವಲ್ ರೇವಣ್ಣನಿಗೆ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ತೀರ್ಪು ಈ ಸಮಾಜ ಎಲ್ಲಾ ವರ್ಗದವರು ಒಂದೆ ಎಂಬುದು ಸಾಬೀತಾಗಿರುವುದನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯು ಸ್ವಾಗತಿಸುತ್ತದೆ ಎಂದು ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಷ್ಟೇ ಬಲಿಷ್ಠರಾದರು ಕಾನೂನು ಮುಂದೆ ಸಮಾನರು ಎಂಬುದನ್ನು ನ್ಯಾಯಾಲಯ ಮತ್ತೊಮ್ಮೆ ಸಾಬೀತುಪಡಿಸಿದೆ ಮತ್ತು ನ್ಯಾಯಾಲಯದ ಮೇಲೆ ಜನರ ವಿಶ್ವಾಸ ಮತ್ತಷ್ಟು ಹೆಚ್ಚಾಲಿದೆ.

- Advertisement - 

ಈ ಗಂಭೀರ ಪ್ರಕರಣವನ್ನು ತನಿಖಾಧಿಕಾರಿಗಳು ಯಾವುದೇ ಪಕ್ಷಪಾತ ತೋರದೆ ಕೋರ್ಟಿಗೆ ಸೂಕ್ತ ಸಾಕ್ಷಾಧಾರಗಳನ್ನು ಒದಗಿಸಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ ಅದಕ್ಕಾಗಿ ಅವರ ಕಾರ್ಯತತ್ಪರತೆಯನ್ನು ಅಭಿನಂದಿಸಬೇಕಾಗಿದೆ.

 ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತನಗಾದ ಘೋರ ಅನ್ಯಾಯವನ್ನು ನ್ಯಾಯಾಲಯಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾದ ಸಂತ್ರಸ್ತ ಮಹಿಳೆಯ ಛಲ ಮತ್ತು ಬದ್ಧತೆಯನ್ನು ಪ್ರಶಂಸಿಸ ಬೇಕಾಗಿದೆ.

- Advertisement - 

ಸಮಾಜದಲ್ಲಿ ಇಂತಹ ಅಪರಾಧಗಳನ್ನು ನಡೆಸುವವರಿಗೆ ಇದು  ಎಚ್ಚರಿಕೆಯಾ ಪಾಠ ವಾಗಲಿದೆ  ಎಂದು ಆಲ್ ಇಂಡಿಯಾ ಬಹುಜನ ಸಾಮಾಜ ಪಾರ್ಟಿಯ  ರಾಜ್ಯ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ತಿಳಿಸಿದರು.

 

Share This Article
error: Content is protected !!
";