ರಾಹುಲ್ ಗಾಂಧಿ ಬಿಚ್ಚಿಟ್ಟ ‘ವೋಟ್ ಚೋರಿ’ಯ ಕರಾಳ ಮುಖ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸತ್ಯದ ಸಿಡಿಲು: ರಾಹುಲ್ ಗಾಂಧಿ ಅವರು ಬಿಚ್ಚಿಟ್ಟ ವೋಟ್ ಚೋರಿಯ ಕರಾಳ ಮುಖ! ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ದೇಶದ ಚುನಾವಣಾ ವ್ಯವಸ್ಥೆಯ ಕರಾಳ ಮುಖವನ್ನು  ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಮತ್ತೆ ಬಯಲು ಮಾಡಿದ್ದಾರೆ.

- Advertisement - 

ಮೊದಲಿಗೆ ಮಹದೇವಪುರ, ಆಳಂದ ಬಳಿಕ ಈಗ ಹರಿಯಾಣ, ಹೀಗೆ ಪ್ರತಿಯೊಂದು ಚುನಾವಣೆಯೂ ಬಿಜೆಪಿಚುನಾವಣಾ ಆಯೋಗದ ಮತಗಳ್ಳತನದ ಮಾಸ್ಟರ್‌ಪ್ಲಾನ್ ಆಗಿರುವುದು ದುರ್ದೈವದ ಸಂಗತಿ! ದಾಖಲೆಗಳೊಂದಿಗೆ ರಾಹುಲ್ ಗಾಂಧಿಯವರು ಬಿಚ್ಚಿಟ್ಟಿರುವ ವಿಷಯವು ಭಯಾನಕ!

5 ಲಕ್ಷಕ್ಕೂ ಅಧಿಕ ನಕಲಿ ಮತದಾರರು, 1 ಲಕ್ಷಕ್ಕೂ ಹೆಚ್ಚು ಕಳವು ಮತಗಳು25 ಲಕ್ಷಕ್ಕೂ ಅಧಿಕ ಮತಗಳ್ಳತನ! ಅಂದರೆ ಹರಿಯಾಣದಲ್ಲಿ ಮತ ಚಲಾಯಿಸಿದ ಪ್ರತಿ 8ರಲ್ಲಿ ಒಂದು ಮತ ನಕಲಿ!

- Advertisement - 

ಮಹಾರಾಷ್ಟ್ರ-ಕರ್ನಾಟಕದಲ್ಲಿ ಭಾರತೀಯರ ಹೆಸರು ದುರುಪಯೋಗಬ್ರೆಜಿಲ್‌ನ ರೂಪದರ್ಶಿಯ ಗುರುತು ಬಳಸಿ ನಕಲಿ ಮತದಾರರ ಸೃಷ್ಟಿಸಿರುವುದನ್ನು ರಾಹುಲ್ ಬಹಿರಂಗ ಪಡಿಸಿದ್ದಾರೆ. ಇದು ಕೇವಲ ರಾಜಕೀಯ ಅಕ್ರಮವಲ್ಲ, ಪ್ರಜಾಪ್ರಭುತ್ವದ ಮೇಲಿನ ದೌರ್ಜನ್ಯ!

ಚುನಾವಣಾ ಆಯೋಗವು ಪಾರದರ್ಶಕತೆ ಕಾಯುವ ಬದಲು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಕೈ ಜೋಡಿಸಿ, ಪ್ರಜಾತಂತ್ರದ ಕತ್ತು ಹಿಸುಕುತ್ತಿರುವಂತೆ ಗೋಚರಿಸುತ್ತಿದೆ. ಜನರ ತೀರ್ಪು ಸ್ಪಷ್ಟವಾಗಿದ್ದರೂ – BJP “ಮತ ಚಲಾವಣೆಅಲ್ಲ, ಮತ ಕಳವುಮೂಲಕ ಜಯ ಸಾಧಿಸಿದೆ!

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ – ಈ ಬಾರಿಯಾದರೂ “ಮಾಲೀಕರ” ರಕ್ಷಣೆಗೆ ಕೈಹಾಕದೆ ಸತ್ಯದ ಪರ ನಿಲ್ಲಲಿ. ದೇಶದ ಪ್ರಜಾಪ್ರಭುತ್ವದ ಗೌರವ ಉಳಿಸುವ ಹೊಣೆ ಅವರ ಮೇಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

 

Share This Article
error: Content is protected !!
";