ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1947ರ ಆಗಸ್ಟ್ 14ರಂದು ಬ್ರಿಟಿಷರ ಕುತಂತ್ರ, ಕಾಂಗ್ರೆಸ್ ನಾಯಕರ ದುರ್ಬಲತೆ ಮತ್ತು ಮತಾಂಧ ದ್ವೇಷದ ಬೆಂಕಿಯಲ್ಲಿ ನಮ್ಮ ತಾಯ್ನಾಡು ಇಬ್ಭಾಗವಾಯಿತು. ಲಕ್ಷಾಂತರ ಸಹೋದರ–ಸಹೋದರಿಯರು ಮನೆ ಕಳೆದುಕೊಂಡು ನಿರಾಶ್ರಿತರಾದರು.
ಸಾವಿರಾರು ಮಂದಿ ಕ್ರೂರ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಆ ನೋವು, ಆ ಬಲಿದಾನ ವ್ಯರ್ಥವಾಗಬಾರದು. ದೇಶವನ್ನು ವಿಭಜಿಸಲು, ನಮ್ಮ ಸಮಾಜದ ಸಾಮರಸ್ಯವನ್ನು ಕದಡಲು, ದ್ವೇಷದ ಬೀಜ ಬಿತ್ತಲು ಯತ್ನಿಸುವ ಯಾವುದೇ ದುಷ್ಟಶಕ್ತಿಗಳಿಗೆ ಮತ್ತೆ ಅವಕಾಶ ಕೊಡಬಾರದು. ಏಕತೆ – ನಮ್ಮ ಶಕ್ತಿ. ರಾಷ್ಟ್ರೀಯತೆ – ನಮ್ಮ ಶಸ್ತ್ರ ಎಂದು ಅಶೋಕ್ ಹೇಳಿದರು.

