ಪ್ರಿಯಕರನೊಂದಿಗೆ ಸೇರಿ ಮಗಳೇ ಅಮ್ಮನನ್ನು ಕೊಂದ ಪಾಪಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಕಳೆದ ಶನಿವಾರ ವರದಿಯಾಗಿದ್ದ ಮಹಿಳೆಯ ಅಸಹಜ ಸಾವು ಪ್ರಕರಣಕ್ಕೀಗ ಸ್ಫೋಟಕ ತಿರುವು ಸಿಕ್ಕಿದೆ.

ಮೃತ ಮಹಿಳೆ ನೇತ್ರಾವತಿ(34)ಯ ಅಪ್ರಾಪ್ತ ಮಗಳು ಮತ್ತು ಆಕೆಯ ಪ್ರಿಯಕರ ಸೇರಿ ಆತನ ಸ್ನೇಹಿತರ ಸಹಕಾರದಿಂದ ಕೊಲೆ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

- Advertisement - 

ಮೃತ ನೇತ್ರಾವತಿಯ ಅಪ್ರಾಪ್ತ ಪುತ್ರಿ, ಆಕೆಯ ಅಪ್ರಾಪ್ತ ಪ್ರಿಯಕರ ಮತ್ತು ಆತನ ಮೂವರು ಸ್ನೇಹಿತರು ಸೇರಿ ಒಟ್ಟು ಐವರು ಅಪ್ರಾಪ್ತರು ಕೊಲೆ ಮಾಡಿರುವ ಪ್ರಕರಣದಲ್ಲಿ ಶಾಮೀಲಾಗಿರುವ ಕುರಿತು ಸುಬ್ರಹ್ಮಣ್ಯಪುರ ಪೊಲೀಸರು ಪತ್ತೆ ಮಾಡಿದ್ದಾರೆ.

ತಾಯಿಯ ಶವ ಸಂಸ್ಕಾರಕ್ಕೂ ಮಗಳು ಬಾರದೇ ಇದ್ದಾಗ ಅನುಮಾನ ವ್ಯಕ್ತಪಡಿಸಿದ್ದ ನೇತ್ರಾವತಿ ಅವರ ಸಹೋದರಿ ಅನಿತಾ, ತನ್ನ ಸಹೋದರಿಯ ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು.

- Advertisement - 

ಪ್ರಿಯಕರನ ಜೊತೆ ಸೇರಿ ತಾಯಿ ಕೊಲೆ ಮಾಡಿ ನಾಪತ್ತೆ ಯಾಗಿದ್ದ ಪುತ್ರಿ ಸಿಕ್ಕಿಬಿದ್ದಿದ್ದೇ ರೋಚಕ. ಅಕ್ಟೋಬರ್ 30ರಂದು ಮನೆಗೆ ಬಂದಿದ್ದ ಬಾಲಕಿಯನ್ನು ವಿಚಾರಣೆ ನಡೆಸಿದಾಗ ಹತ್ಯೆಯ ವೃತ್ತಾಂತ ಬಯಲಾಗಿದೆ.

ಪೊಲೀಸರು ಕೊಲೆ ಪ್ರಕರಣದ ಐವರು ಅಪ್ರಾಪ್ತರನ್ನೂ ಬಂಧಿಸಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ ಹಡಣ್ಣನವರ್ ಮಾಹಿತಿ ನೀಡಿದ್ದಾರೆ.

 

 

Share This Article
error: Content is protected !!
";