ಚಂದ್ರವಳ್ಳಿ ನ್ಯೂಸ್, ಆನೇಕಲ್, ಬೆಂಗಳೂರು ಗ್ರಾಮಾಂತರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ 150 ಅಡಿ ಎತ್ತರದ ತೇರು ಬಿದ್ದು ಆರನೇ ತರಗತಿಯ ವಿದ್ಯಾರ್ಥಿನಿ ಜ್ಯೋತಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಮೃತ ಜ್ಯೋತಿ ತಾಯಿ ಗಂಗಮ್ಮ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಜಾತ್ರೆಯಲ್ಲಿ ಅಂಗಡಿ ಹಾಕಿದ್ದಾಗ ಜೋರು ಮಳೆ ಬಂತು. ಗೊಂಬೆಗಳನ್ನ ತುಂಬಿಕೊಂಡು ನಾನು ಬೇರೆಡೆ ಇಟ್ಟು ಬರಲು ಹೋಗಿದ್ದೆ.
ನನ್ನ ಮಗಳು, ಆಕೆಯ ಸ್ನೇಹಿತೆ ಪಾನಿಪುರಿ ಅಂಗಡಿ ಹತ್ತಿರ ನಿಂತಿದ್ದರು. ನಾನು ಬರುವುದರ ಒಳಗೆ ತೇರು ನನ್ನ ಮಗಳ ಮೇಲೆ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೂ ನನ್ನ ಮಗಳು ಬದುಕಲಿಲ್ಲ ಎಂದು ಹೇಳಿ ಕಣ್ಣೀರು ಹಾಕಿದರು.