ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ:
ವಧುವಿಗೆ ತಾಳಿ ಕಟ್ಟಿದ ಕ್ಷಣದಲ್ಲೇ ವರನೊಬ್ಬ ಹೃದಯಾಘಾತದಲ್ಲಿ ದಾರುಣವಾಗಿ ಸಾವು ಕಾಣುವ ಮೂಲಕ ಮದುವೆ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದ್ದಲ್ಲ ಗಂಡು ಮತ್ತು ಹೆಣ್ಣಿನ ಕುಟುಂಬಗಳಲ್ಲಿ ಆಕ್ರಂಧನ ಮುಗಿಲು ಮುಟ್ಟಿದ್ದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದೆ.
ಕುಂಬಾರಹಳ್ಳ ಗ್ರಾಮದ ನಿವಾಸಿ ವರ ಪ್ರವೀಣ ಕುರ್ನೆ ಮೃತಪಟ್ಟ ದುರ್ದೈವಿ. ಕಲ್ಯಾಣ ಮಂಟಪದಲ್ಲಿ ಪ್ರವೀಣ ಕುರ್ನೆ ಹಾಗೂ ಯುವತಿಯ ಮದುವೆ ಸಮಾರಂಭ ನಡೆಯುತ್ತಿತ್ತು.
ಆದರೆ, ಕೆಲವೇ ಕ್ಷಣದಲ್ಲಿ ಅಲ್ಲಿ ಸೂತಕದ ಛಾಯೆ ಆವರಿಸಿದೆ. ಪ್ರವೀಣ ಕುರ್ನೆ ರಾಜ್ಯ ಸೈಕ್ಲಿಂಗ್ ಸಂಘದ ಕಾರ್ಯದರ್ಶಿ ಶ್ರೀಶೈಲ ಕುರ್ನೆ ಇವರ ಪುತ್ರ ಎನ್ನಲಾಗಿದೆ.