ಭೀಕರ ಅಪಘಾತ ನಾಲ್ವರ ಸಾವು

News Desk

ಚಂದ್ರವಳ್ಳಿ ನ್ಯೂಸ್, ಹೊಸಕೋಟೆ (ಬೆಂ.ಗ್ರಾಮಾಂತರ):
ಲಾರಿ ಮತ್ತು ಬಸ್ ಮಧ್ಯ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಓವರ್​​ಟೇಕ್ ಮಾಡುವ ಭರದಲ್ಲಿ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಆಂಧ್ರಪ್ರದೇಶದ ಸಾರಿಗೆ ಬಸ್​ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಹೊಸಕೋಟೆ ಗೊಟ್ಟಿಪುರ ಗೇಟ್​​ ಬಳಿ ಇಂದು ಮುಂಜಾನೆ ದುರ್ಘಟನೆ ಸಂಭವಿಸಿದೆ.

- Advertisement - 

ತಿರುಪತಿಯಿಂದ ಬೆಂಗಳೂರಿನತ್ತ ಆಂಧ್ರಪ್ರದೇಶದ ಬಸ್ ಬರುತ್ತಿತ್ತು. ಈ ವೇಳೆ ಚಾಲಕ ಓವರ್​​ಟೇಕ್ ಮಾಡಲು ಮುಂದಾಗಿದ್ದು, ಲಾರಿಗೆ ಬಸ್​ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಸ್​​ನ ಮುಂಭಾಗ ಮತ್ತು ಒಂದು ಬದಿ ಸಂಪೂರ್ಣ ಜಖಂ ಆಗಿದೆ. ಘಟನೆಯಲ್ಲಿ ಬಸ್​​ನಲ್ಲಿದ್ದ ಕೇಶವರೆಡ್ಡಿ (44), ತುಳಸಿ (21), ಪ್ರಣತಿ (4) ಹಾಗೂ 1 ವರ್ಷದ ಮಗು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರ 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಹಾಗೂ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement - 

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಯಾಣಿಕ ಮದನ್ ಮೋಹನ್ ರೆಡ್ಡಿ, ನಾವು ಚಿತ್ತೂರಿನಲ್ಲಿ ಬಸ್ ಹತ್ತಿದೆವು.

9 ಗಂಟೆಗೆ ಬರಬೇಕಿದ್ದ ಬಸ್​ 11 ಗಂಟೆಗೆ ಚಿತ್ತೂರಿಗೆ ಬಂತು. ಎಲ್ಲರೂ ಮಲಗಿದ್ದಾಗ ಮುಂಜಾನೆ ಸಮಯದಲ್ಲಿ ದೊಡ್ಡದ್ದಾಗಿ ಶಬ್ದ ಬಂತು. ಎಚ್ಚರಗೊಂಡು ನೋಡಿದಾಗ ಬಸ್ಸಿನ ಮೇಲ್ಭಾಗ ಸೇರಿದಂತೆ ಒಂದು ಬದಿ ಸಂಪೂರ್ಣ ಜಖಂಗೊಂಡಿತ್ತು. ನನ್ನ ಪತ್ನಿಯ ಕಾಲಿಗೂ ಗಾಯವಾಗಿದೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಲಾಗಿತು ಎಂದರು.

- Advertisement - 

 

Share This Article
error: Content is protected !!
";