ಅಪಘಾತದಲ್ಲಿ ನವಜೋಡಿಗಳ ಧಾರುಣ ಸಾವು, ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನವ ಜೋಡಿಗಳು ಸೇರಿದಂತೆ ವರನ ತಾಯಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದ್ದರೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಜರುಗಿದೆ.

 ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲ್ಲೂಕಿನ ಹಿರೇಕಾಟಿ ಗೇಟ್‌ಬಳಿ ಮಂಗಳವಾರ ತಡರಾತ್ರಿ ಬೈಕ್‌ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ನವದಂಪತಿ ಹಾಗೂ ವರನ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೂವರ ಕಣ್ಣುಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ದೃಷ್ಟಿ ನೀಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮಂಗಳವಾರ ರಾತ್ರಿ ಹೆಚ್. ಡಿ. ಕೋಟೆ ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಹೋಗಿ ತಮ್ಮ ಸ್ವಗ್ರಾಮಕ್ಕೆ ಹಿಂತಿರುಗುವಾಗ ಕಾರು ಮತ್ತು ಬೈಕ್ ಮಧ್ಯ ಭೀಕರ  ಅಪಘಾತ ಸಂಭವಿತ್ತು.
ನವಜೋಡಿಗಳಾದ ಮೃತ ಶಾಲಿನಿ ಹಾಗೂ ಶಶಿಧರ್‌ಹಾಗೂ ಶಶಿಧರ್‌ತಾಯಿ ಭಾಗ್ಯಮ್ಮ ಬೈಕ್​ನಲ್ಲಿ ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಮತರು
9 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.
ಮೈಸೂರಿನ ಕೆ. ಆರ್.‌ಆಸ್ಪತ್ರೆಯ ಶವಾಗಾರದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಕುಟುಂಬದವರು ಮೂವರ ಕಣ್ಣುಗಳನ್ನು ಕೆ. ಆರ್.‌ಆಸ್ಪತ್ರೆಯ ನೇತ್ರದಾನ ಕೇಂದ್ರಕ್ಕೆ ದಾನ ಮಾಡಿದ್ದು, 6 ಜನರ ಬಾಳಿಗೆ ಬೆಳಕಾಗಿದ್ದಾರೆ.
ಮತ ಶಶಿಧರ್​ ಅವರ ದೊಡ್ಡಪ್ಪ ಸಿದ್ದಯ್ಯ ಮಾತನಾಡಿ ಮೈಸೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಎರಡು ಬೈಕ್​ಗೆ ಡಿಕ್ಕಿ ಹೊಡೆದಿದೆ.

ಬೈಕ್​ನಲ್ಲಿ ಹೋಗುತ್ತಿದ್ದ ನನ್ನ‌‌ತಮ್ಮ‌ನ ಹೆಂಡತಿ, ಸೊಸೆ, ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗ-ಸೊಸೆ ಮದುವೆ ಆಗಿ‌9 ತಿಂಗಳಾಗಿತ್ತು‌ಅಷ್ಟೇ. ಅನಿರೀಕ್ಷಿತ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಅವರ ಕಣ್ಣುಗಳಾದರೂ ಬೇರೆಯವರ ಜೀವನಕ್ಕೆ ಬೆಳಕಾಗಲಿ ಎಂದು 3 ಜನರ ಕಣ್ಣುಗಳನ್ನು ದಾನ ಮಾಡಿದ್ದೇವೆ. ಇದರಿಂದ ಒಟ್ಟು 6 ಜನರಿಗೆ ಆ ಕಣ್ಣುಗಳು ಉಪಯೋಗ ಆಗುತ್ತವೆ. ಕಣ್ಣುದಾನದ ಎಲ್ಲಾ ಪ್ರಕ್ರಿಯೆ ‌ಮುಗಿದಿದೆ ಎಂದು ಗುರುಸಿದ್ದಪ್ಪ ಹೇಳಿದರು.

 

 

- Advertisement -  - Advertisement - 
Share This Article
error: Content is protected !!
";