ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕ ಮಕ್ಕಳ ಸಾವನ್ನು ಅವರ ಕುಟುಂಬಗಳು ಆರಗಿಸಿಕೊಳ್ಳಲಾಗಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಕಾಲ್ತುಳಿತದ ದುರ್ಘಟನೆಯಲ್ಲಿ ಸತ್ತವರ ನೆನೆದು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದರು.
ನಾಡಿನ ಜನರೆಲ್ಲ ಅವರಿಗಾಗಿ ದುಃಖಿಸುತ್ತಿದ್ದಾರೆ ಎಂದು ಗದ್ಗದಿತ ಧ್ವನಿಯಲ್ಲಿ ಅವರು ಹೇಳಿದರು. ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಬೆಂಗಳೂರಿಗೆ ಬರುತ್ತಿರುವ ವಿಷಯವನ್ನು ತಿಳಿಸಿದ್ದರು.
ಹಾಗಾಗಿ ಸರ್ಕಾರಕ್ಕೆ ಬೇರೆ ಆಪ್ಷನ್ ಇರಲಿಲ್ಲ. ಸನ್ಮಾನ ಮಾಡಲೇಬೇಕಿತ್ತು. ಯಾರನ್ನೂ ದೂಷಿಸುವ ಪ್ರಯತ್ನ ತಾನು ಮಾಡುತ್ತಿಲ್ಲ. ಈ ದುರ್ಘಟನೆಯಿಂದ ಪಾಠ ಕಲಿಯಬೇಕಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.