ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದೇಶ ನಿರ್ಮಾಣದ ಕ್ಷೇತ್ರದಲ್ಲಿ ಸೈನಿಕರು ರೈತರಂತೆ ಶಿಕ್ಷಕರದ್ದು ಕೂಡ ಮಹತ್ವಪೂರ್ಣವಾದ ಸ್ಥಾನವಿದೆ ಎಂದು ಸಿದ್ದಗಂಗ ಮಠದ ಶ್ರೀ ಸಿದ್ದಲಿಂಗ7 ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಆದಿವಾಲ ಗ್ರಾಮದಲ್ಲಿ ಶನಿವಾರ ನಡೆದನೆಹರು ಗ್ರಾಮಾಂತರ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆ ಮತ್ತು ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಪರಂಪರೆಯಲ್ಲಿ ಶಾಶ್ವತವಾದ ಸ್ಥಾನ ಹೊಂದಿದೆ. ಮಕ್ಕಳ ಪ್ರೀತಿ ಶಿಕ್ಷಕರಿಗೆ ಪ್ರದಾನವಾಗಬೇಕು.
ಬೇಧ ಭಾವಗಳು ತೊಲಗಿ ಸಾಧನೆಯ ರೂಪಗಳಬೇಕು ಗೌರವಿಸುವ ಬೆಳೆಸುವ ಗುರುತಿಸುವ ಪ್ರಕ್ರಿಯೆಗಳು ನಿರಂತರವಾಗಿರಬೇಕು. ಜ್ಞಾನಕ್ಕೆ ಸಮಾನವಾದ ವಸ್ತು ಯಾವುದು ಇಲ್ಲ.
ಶಿಕ್ಷಣದ ಅವಶ್ಯಕತೆಗೆ ಶಿಕ್ಷಕರ ಪೋಷಕರ ಪಾತ್ರ ಸಮನಾಗಿದೆ ಮಕ್ಕಳಲ್ಲಿ ನೈತಿಕ ಪಾಠಗಳನ್ನು ಬಿತ್ತಬೇಕು ತಂದೆ ತಾಯಿ ಆದರ್ಶ ಮತ್ತು ಕಲಿಕೆಯ ಪ್ರೀತಿಗೆ ಒತ್ತಾಸೆಯಾಗಿ ನಿಲ್ಲಬೇಕಿದೆ.
ಹಳ್ಳಿ ಭಾಗದ ಜನರ ಶಿಕ್ಷಣದ ಅವಶ್ಯಕತೆ ಅರಿತು ಅಂದು ಆರಂಭವಾದ ನೆಹರು ಗ್ರಾಮಾಂತರ ಪ್ರೌಢಶಾಲೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳ ಬದುಕನ್ನು ಹಸನು ಮಾಡಲು ಕುಟುಂಬಕ್ಕೆ ನೆರವಾಗಲು ಜೊತೆಯಾಗಿದೆ ಶ್ರೀಮಠವು ಸರ್ಕಾರದ ಜೊತೆ ಸೇರಿ ಶಿಕ್ಷಣಕ್ಕೆ ಅದ್ಯತೆ ನೀಡಿದೆ ನಾಡಿನಲ್ಲಿ ಸಾಕ್ಷರತೆ ಪ್ರಮಾಣ ಮತ್ತು ಶಿಕ್ಷಣಕ್ಕೆ ನಾಡಿನ ಮಠ ಮಾನ್ಯಗಳ ಕೊಡುಗೆಯಾಗಿದೆ ಅಕ್ಷರದ ಜೊತೆ ದಾಸೋಹದ ಜೊತೆ ಲಕ್ಷಾಂತರ ಮನ ಮನಸ್ಸುಗಳನ್ನು ಬೇಸೆದಿದೆ ಸಲವತ್ತುಗಳು ಕಡಿಮೆ ಇದ್ದ ಕಾಲದಲ್ಲಿ ಸಂಸ್ಕಾರಗಳ ಉತ್ತಮವಾಗಿದ್ದವು ಎಲ್ಲ ಸವಲತ್ತುಗಳು ದೊರಕಿದರು ಬದುಕುಗಳು ದುಸ್ತರವಾಗಿವೆ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹದಡಿ ಕನ್ನಡ ಶಾಲೆಗಳು ಹಿಂದುಳಿದಿಲ್ಲ ಕನ್ನಡದಲ್ಲಿ ಐಎ ಎಸ್ ಐಪಿಎಸ್ ಮಾಡಿರುವ ನಿದರ್ಶನಗಳು ನಮ್ಮ ಮುಂದಿವೆ ಎಂದರು.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ.ಸುಧಾಕರ್ ಮಾತನಾಡಿ ಸರ್ಕಾರವು ಮಾಡಲಾಗದ ಶಿಕ್ಷಣ ಸೇವೆಯನ್ನು ಸಿದ್ದಗಂಗ ಮಠವು ಮಾಡಿದೆ ನಾಡಿಗೆ ಮತ್ತು ದೇಶಕ್ಕೆ ಹಲವಾರು ಜ್ಞಾನಿಗಳನ್ನು ಕೊಡುಗೆಯಾಗಿದೆ ನೀಡಿದೆ ನನ್ನ ಕ್ಷೇತ್ರದಲ್ಲಿ ಸಿದ್ದಗಂಗ ಕ್ಷೇತ್ರದ ಶಾಲೆ ಹೊಂದಿರುವುದು ಹೆಮ್ಮೆ ಅನಿಸುತ್ತಿದೆ ಎಂದರು.
ವಿಧಾನ ಪರಿಷತ್ತಿನ ಸದಸ್ಯರಾದ ಕೆ ಎಸ್ ನವೀನ್ ಮಾತನಾಡಿ ಭವಿಷ್ಯದ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳ ಶಾಲೆಯಾಗಿದೆ ಶ್ರೀಗಳವರು ಶಿಕ್ಷಣಕ್ಕೆ ಅದ್ಯತೆ ಕೊಟ್ಟು ಶಿಸ್ತು ಮತ್ತು ಅನನ್ಯ ಕಾರ್ಯಗಳ ಮೂಲಕ ಜಗದಗಲದಲ್ಲಿ ನಾಡಿನ ಕೀರ್ತಿಯನ್ನು ಬೆಳಗಿಸಿದ್ದಾರೆ ಎಂದರು.
ಆದಿಜಾಂಬವ ಅಭಿರುದ್ದಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್ ಮಾತನಾಡಿ ಕೊರೋನಾದ ಕರಾಳ ದಿನಗಳಲ್ಲಿ ಸಿದ್ದಗಂಗ ಮಠ ನಾಡಿನ ಬಡ ಮಕ್ಕಳಿಗೆ ಅನ್ನ ಹಾಕಿ ಮಾದರಿಯಾಗಿದೆ. ಹಿರಿಯ ಶ್ರೀಗಳವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಸಿದ್ದಗಂಗ ಮಠ ನಮಗೆಲ್ಲ ಸ್ಪೂರ್ತಿದಾಯಕವಾಗಿದೆ ಎಂದರು.
ನಿವೃತ್ತ ಶಿಕ್ಷಕ ಎಂ ಬಸವರಾಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದ, ದೇವರಾಜು, ಟಿ ತ್ರಿಯಂಬಕಮೂರ್ತಿ, ಚಮನ್ ಷರೀಫ್, ಡಾ ಜೆ ಆರ್ ಸುಜಾತ, ಆಸಿಫ್ ಅಲಿ, ಕಿರಣ್ ಪಟ್ರೇಹಳ್ಳಿ, ಮಹಮದ್ ಫಕ್ರುದ್ದೀನ್, ಯರಗುಂಟೇಶ್ವರ ಮತ್ತಿತರರು ಇದ್ದರು.
“ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹದಡಿ ಕನ್ನಡ ಶಾಲೆಗಳು ಹಿಂದುಳಿದಿಲ್ಲ ಕನ್ನಡದಲ್ಲಿ ಐಎಎಸ್ ಐಪಿಎಸ್ ಮಾಡಿರುವ ನಿದರ್ಶನಗಳು ನಮ್ಮ ಮುಂದಿವೆ”. ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಸಿದ್ದಗಂಗ ಮಠ, ತುಮಕೂರು.

