ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಲೆಕ್ಕಪರಿಶೋಧನ ಮತ್ತು ಲೆಕ್ಕಪತ್ರ ಇಲಾಖೆಯ ಉಪನಿರ್ದೇಶಕಿ ಚೈತ್ರಾ ಆರ್(32) ಕಡಿಮೆ ರಕ್ತದೊತ್ತಡದಿಂದಾಗಿ ಏಪ್ರಿಲ್ 14 ,ಸೋಮವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ತಾಂತ್ರಿಕ ಶಿಕ್ಷಣ ಇಲಾಖೆಯ ಲೆಕ್ಕಪತ್ರ ಶಾಖೆಯ ಉಪನಿರ್ದೇಶಕಿ ಹಾಗೂ ಇ-ಆಡಳಿತ ಇಲಾಖೆಯ ಲೆಕ್ಕಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.
ತಂದೆ,ತಾಯಿ, ಓರ್ವ ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಏಪ್ರಿಲ್ 15 ರ ಸಂಜೆ ರಾಜಾಜಿನಗರದ ರುದ್ರಭೂಮಿಯಲ್ಲಿ ಜರುಗಿತು.