ಹಾಲು ಸಂಘದ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ-ನಂಜೇಮರಿಯಪ್ಪ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಹಾಲು ಉತ್ಪಾದಕರ ಅಭಿವೃದ್ಧಿಗೆ ಅವಶ್ಯಕತೆ ಸಲಹೆ ಹಾಗೂ ಸಹಕಾರವನ್ನು ಹಾಲು ಉತ್ಪಾದಕ ರೈತರಿಂದ ಪಡೆದು
  ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ವಿಶೇಷವಾಗಿ ರೈತರಿಗೆ ಜೀವನಕ್ಕೆ ಆಧಾರವಾಗಿರುವ ಹಸು ಮೃತ ಪಟ್ಟ ಸಮಯದಲ್ಲಿ  ನೀಡುವ ಸಹಾಯಧನವನ್ನು 2 ಸಾವಿರ ರೂಪಾಯಿಗಳಿಂದ 4 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಲ್. ಕೆ. ನಂಜೇಮರಿಯಪ್ಪ ತಿಳಿಸಿದರು.

ತಾಲೂಕಿನ ಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಇಂದಿನ ಕಾರ್ಯಕ್ರಮವು  ಬೆಂಗಳೂರು ಹಾಲು ಒಕ್ಕೂಟ ಹಾಗೂ ಕೆಎಂಎಫ್ ನಿರ್ದೇಶಕರಾದ ಬಿ ಸಿ ಅನಂದ್ ಕುಮಾರ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರಣಾಂತರಗಳಿಂದ ಅವರು ಸಭೆಗೆ ಬರಲು ಸಾಧ್ಯವಾಗಲಿಲ್ಲ ಆದರೆ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ

- Advertisement - 

ಸಹಕಾರ ಸಂಘದ ವತಿಯಿಂದ  ರೈತರಿಗೆ ಉಂಟಾಗುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲಾಗುತ್ತಿದ್ದು, ಸ್ಥಳೀಯ ಹಾಲು ಉತ್ಪಾದಕರ ಅಭಿವೃದ್ಧಿಗಾಗಿ  ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ . ಸಂಘದ ಅಭಿವೃದ್ಧಿಗೆ ಸರ್ವರ ಸಹಕಾರವು ಅಗತ್ಯ  ಎಂದರು.

 ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಎಲ್ ಬಿ ನಾಗರಾಜು ಮಾತನಾಡಿ ನೂತನ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ  ಡಿಕೆ ಸುರೇಶ್  ರಾಜ್ಯದ ಹಾಲು ಉತ್ಪಾದಕರಿಗೆ ಶಕ್ತಿ ತುಂಬಲು ಹಲವಾರು ನೂತನ ಯೋಜನೆಗಳನ್ನು  ರೂಪಿಸುತ್ತಿದ್ದಾರೆ . ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿರುವ  ರೈತ ಕುಟುಂಬಗಳ ನೆರವಿಗೆ ಕೆಎಂಎಫ್  ಹಾಗೂ ಬಮೂಲ್ ಸಂಸ್ಥೆಗಳು ಶ್ರಮಿಸುತ್ತಿದ್ದು, ರಾಜ್ಯದ ಹಾಲು ಉತ್ಪಾದಕ ಸಹಕಾರ ಸಂಘಗಳ ಹಾಗೂ ರೈತರ ಸಹಭಾಗಿತ್ವದೊಂದಿಗೆ  ಅಭಿವೃದ್ಧಿ ಸಾಧ್ಯ ಎಂದರು.

- Advertisement - 

 ಈ ಸಂದರ್ಭದಲ್ಲಿ ಲಿಂಗನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎಲ್.ಕೆ.ನಂಜೇಮರಿಯಪ್ಪ,ಉಪಾಧ್ಯಕ್ಷ ಮುನಿರಾಜು, ನಿರ್ದೇಶಕರಾದ ಎಸ್. ಸಂಜೀವಮೂರ್ತಿ, ಎಲ್.ಎನ್. ಶ್ರೀನಿವಾಸಮೂರ್ತಿ, ಆರ್. ಪುಟ್ಟಮೂರ್ತಿ, ಎಂ. ಮುನೇಗೌಡ, ಹೆಚ್. ಆಂಜನಪ್ಪ, ಕೆ.ಎನ್. ಮೂರ್ತಿ, ಟಿ. ರಾಜಣ್ಣ, ಶ್ಯಾಮಸುಂದರ್, ಎಲ್.ಆರ್. ರಾಜಣ್ಣ, ಕೆ. ಅಂಬಿಕಾ, ಕು.ಶಶಿಕಲಾ, ಎಸ್. ಶ್ರೀನಿವಾಸಮೂರ್ತಿ, ಲಕ್ಷ್ಮೀ ನಾಗೇಶ್ ಟಿಎಂಪಿಸಿ ಸದಸ್ಯರು, ಮುಖಂಡರಾದ ಬಿ ಆನಂದ್, ಗೋವಿಂದ್ ಸ್ವಾಮಿ ಸಿಬ್ಬಂದಿಗಳಾದ ಎಲ್.ಎಂ. ಮಂಜುನಾಥ್, ನಿಶ್ಚಲ್, ಶಾಂತರಾಜು ಹಾಜರಿದ್ದರು.

 

 

 

Share This Article
error: Content is protected !!
";