ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಕ್ಟೋಬರ್-19 ರಂದು ಭಾನುವಾರ ದೊಡ್ಡಬಳ್ಳಾಪುರದ ಆರ್ ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ ಆರ್ ಎಲ್ ಜಾಲಪ್ಪನವರ 100ನೇ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಆಗಮಿಸುತ್ತಿರುವುದರಿಂದ ಪೂರ್ವ ತಯಾರಿಗಾಗಿ ಕಾರ್ಯಕ್ರಮದ ಸಿದ್ಧತೆಯ ಪರಿಶೀಲನೆ ಮಾಡಲಾಯಿತು.
ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಶುಕ್ರವಾರ ಕ್ಯಾಂಪಸ್ ಗೆ ಆಗಮಿಸಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಬಸವರಾಜ್, ತಹಶೀಲ್ದಾರ್ ವಿಭ ವಿದ್ಯಾ ರಾಥೋಡ್, ಡಿವೈಎಸ್ಪಿ ಪಿ.ರವಿ,
ನಗರಸಭೆ ಆಯುಕ್ತ ಕಾರ್ತಿಕೇಶ್ವರ್, ಎಸ್ ಡಿಯುಇಟಿ ಯ ಉಪಾಧ್ಯಕ್ಷ ಜೆ ರಾಜೇಂದ್ರ, ಉಪನ್ಯಾಸಕರಾದ ಪ್ರೊ.ರವಿಕಿರಣ್, ಮುತ್ತಣ್ಣ ಹಾಗೂ ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.

