ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿಂದುಳಿದ ಅಲೆಮಾರಿ ಸಮುದಾಯದ ಕಲಾವಿದರಾದ ಹಗಲುವೇಷ ಜಾನಪದ ಕಲಾವಿದರನ್ನು ಗುರುತಿಸಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ ಜಿಲ್ಲಾಡಳಿತಕ್ಕೆ ಅಲೆಮಾರಿ ಸಮುದಾಯಗಳ ಮುಖಂಡರು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹಲವು ದಶಕಗಳ ಕಾಲ ಹಗಲು ವೇಷ ಹಾಕಿ ಜೀವನ ಮಾಡಿದ್ದೇವೆ. ಆದರೆ ಯಾವುದೇ ಜಿಲ್ಲಾಧಿಕಾರಿಗಳು, ಸರ್ಕಾರ ನಮ್ಮ ಸೇವೆ ಗುರುತಿಸಿರಲಿಲ್ಲ.
ನವೆಂಬರ್-1 ರಂದು ಹಗಲು ವೇಷದ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ಅತ್ಯಂತ ಖುಷಿಯ ವಿಷಯ ಎಂದು ಹಿರಿಯೂರು ಹೊರ ವಲಯದ ಕೆ ಎಂ ಕೊಟ್ಟಿಗೆ, ಡಿಸಿ ಕಾಲೋನಿ ನಿವಾಸಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.