ಜಲಾಶಯ ನಿರ್ಮಾಣದ ರೈತರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ದೊಡ್ಡಬೆಳವಂಗಲ ಹೋಬಳಿ
 ತಿಪ್ಪೂರು ಬಳಿಯ ಗೊರವೆಹಳ್ಳದಲ್ಲಿ ಜಲಾಶಯ  ನಿರ್ಮಾಣ ಮಾಡಬೇಕೆಂಬುದು ಸ್ಥಳೀಯ ರೈತರ ಬಹುದಿನಗಳ ಬೇಡಿಕೆ, ಇಂದು ಜಿಲ್ಲಾಧಿಕಾರಿ ಬಸವರಾಜು ಸ್ಥಳಕ್ಕೆ ಭೇಟಿ ರೈತರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕು ದೊಡ್ಡಬೆಳವಂಗಲ ಹೋಬಳಿಯ  ತಿಪ್ಪೂರು ಗ್ರಾಮದ  ಜಾಲಿಗೆ ಅರಣ್ಯ ಪ್ರದೇಶದಲ್ಲಿ ಗೊರವೆ ಹಳ್ಳ ವಿದೆ ಮಳೆಗಾಲದಲ್ಲಿ ಬಿದ್ದ  ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ, ಹರಿಯುವ ನೀರಿಗೆ ಕಟ್ಟೆಯನ್ನು ಕಟ್ಟಿ ಇಲ್ಲಿ ಸಂಗ್ರಹವಾಗುವ ನೀರನ್ನು ಸುತ್ತಮುತ್ತಲಿನ ಹತ್ತಾರು ಕೆರೆಗಳಿಗೆ ಹರಿ ಬಹುದು. ಕಳೆದ 10 ವರ್ಷಗಳಿಂದ ಗೊರವಿ ಹಳ್ಳದಲ್ಲಿ ಡ್ಯಾಮ್ ಕಟ್ಟುವಂತೆ ರೈತರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

- Advertisement - 

ರೈತರ ಮನವಿ ಹಿನ್ನಲೆ ಇಂದು ಜಿಲ್ಲಾಧಿಕಾರಿ ಬಸವರಾಜು ಸ್ಥಳಕ್ಕೆ ಭೇಟಿ ನೀಡಿದರು, ರೈತರ ಸ್ಪಂದಿಸಿದ ಅವರು ರೈತರಿಗೆ ಅನುಕೂಲವಾದರೆ ಡ್ಯಾಮ್ ನಿರ್ಮಾಣ ಮಾಡಲಾಗುವುದು, ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು ಅರಣ್ಯ ಇಲಾಖೆಯ ಅನುಮತಿ ನಂತರ ಮುಂದಿನ ಕ್ರಮ ತೆಗೆದು ಕೊಳ್ಳವುದಾಗಿ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ರೈತ ಮುಖಂಡರಾದ ಮುತ್ತೇಗೌಡ, ಹಾಗು ಸುಲೋಚನಮ್ಮ  ರವರ ನೇತೃತ್ವದಲ್ಲಿ ಗೊರವೆ ಹಳ್ಳದಲ್ಲಿ ಜಲಾಶಯ ನಿರ್ಮಾಣಕ್ಕೆ   ಮನವಿ ಮಾಡಲಾಗಿದೆ, ಜಲಾಶಯ ನಿರ್ಮಾಣದಿಂದ ತಿಪ್ಪೂರು, ಹಣಬೆ, ಅರಳುಮಲ್ಲಿಗೆ, ಕೆಸ್ತೂರು ಗ್ರಾಮಗಳ ಕೆರೆಗಳಿಗೆ ನೀರು ಹರಿಸಬಹುದು, ಇದರಿಂದ ಕೃಷಿ ನಿರತ ರೈತರಿಗೆ ನೆರವಾಗುವುದು ಎಂದರು.

- Advertisement - 

ತಿಪ್ಪೂರು ಗ್ರಾಮದ ಮುಖಂಡ ಟಿ.ಡಿ.ಮುನಿಯಪ್ಪ ಮಾತನಾಡಿ, ಡ್ಯಾಮ್ ನಿರ್ಮಾಣದಿಂದ  ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಯಲ್ಲಿ ಕಡಿಮೆ ಅಂತರದಲ್ಲಿ ನೀರು ಸಿಗುತ್ತೆ ಹಾಗು ಇಲ್ಲಿನ ನೀರು , ಕೆರೆಗಳಿಗೆ ಹರಿಯುವುದರಿಂದ. ಕೃಷಿಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್, ತಾಲೂಕು ಅಧ್ಯಕ್ಷ ಹನುಮೇಗೌಡ, ಶಿರವಾರ ರವಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಣ್ಣ, ಪಿಡಿಓ ಉಮೇಶ್, ದೊಡ್ಡಬಳ್ಳಾಪುರ ನಗರಸಭೆ  ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ ಐಟಿ ಉದ್ಯೋಗಿ ರಾಜಶೇಖರ್ ಹಾಜರಿದ್ದರು.

 

 

Share This Article
error: Content is protected !!
";