ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬರಪೀಡಿತ ಬಯಲು ಸೀಮೆಗೆ ಜೀವ ಜಲ! ಬಹುಕಾಲದ ಕನಸಾಗಿದ್ದ ಎತ್ತಿನಹೊಳೆ ಯೋಜನೆ ಈಗ ವಾಸ್ತವ ರೂಪ ಪಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಇದೇ ದಿನ, ಒಂದು ವರ್ಷದ ಹಿಂದೆ, ಅಂದರೆ ಸೆಪ್ಟೆಂಬರ್ 6, 2024 ರಂದು, ಸಕಲೇಶಪುರದಲ್ಲಿ ಎತ್ತಿನಹೊಳೆ ಕುಡಿಯುವ ನೀರು ಯೋಜನೆಯ ಮೊದಲ ಹಂತ ಉದ್ಘಾಟನೆ ಮಾಡಲಾಗಿತ್ತು.
23,251 ಕೋಟಿ ವೆಚ್ಚದ ಈ ಯೋಜನೆ, ಏಳು ಜಿಲ್ಲೆಗಳ 75 ಲಕ್ಷಕ್ಕೂ ಹೆಚ್ಚು ಜನರ ನೀರಿನ ಬವಣೆಗೆ ಅಂತ್ಯ ಹಾಡಲಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆದ್ಯತೆಯ ಮೇಲೆ ನೀರು ತಲುಪಿಸುವ ಕಾರ್ಯ ಭರದಿಂದ ಸಾಗಿದ್ದು, ಇದು ನಮ್ಮ ಸರ್ಕಾರದ ಜನಪರ ಬದ್ಧತೆಯನ್ನು ತೋರಿಸುತ್ತದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

