ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದದಾಬಸ್‌ಪೇಟೆ-ಹೊಸಕೋಟೆ ಹೆದ್ದಾರಿಯಲ್ಲಿ ಪಿಕಪ್ ವಾಹನದ ಬ್ಯಾಕ್ ವೀಲ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕು ಕೊಡುಗೇಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೇಸ್ಟ್ರು ಮನೆ ಕ್ರಾಸ್ ಬಳಿ ನಡೆದಿದೆ.
ಕಬ್ಬಿಣದ ಶೀಟ್ ಗಳನ್ನು ಹೊತ್ತು ಹೊಸಕೋಟೆಯಿಂದ ತುಮಕೂರಿಗೆ ತೆರಳುವಾಗ ಹಿಂಬದಿಯ ಚಕ್ರ ಮುರಿದು ಬಿದ್ದಿದೆ. ಈ ಹಿನ್ನೆಲೆ ವಾಹನ ಪಲ್ಟಿ ಹೊಡಿದಿದೆ. ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪಿಕಪ್ ವಾಹನ ಪಲ್ಟಿಯಾದ ಹಿನ್ನೆಲೆ ಕಬ್ಬಿಣದ ಶೀಟ್ ಗಳು ಹೆದ್ದಾರಿಗೆ ಬಿದ್ದಿದ್ದು, ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಸರಕು ಸಾಗಣೆ ಮಾಡುವ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿ ಇಲ್ಲದೆ ಚಲಾಯಿಸುವುದು ರಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳು ಬೇಕಾದಷ್ಟು ಸಾವು ನೋವುಗಳು ಸಂಭವಿಸುತ್ತಿರುತ್ತವೆ ರಾಷ್ಠೀಯ ಅಭಿವೃದ್ದಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಇಂತಹ ವಾಹನಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರ ಅಗ್ರಹವಾಗಿದೆ.

