ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೀವ್ರ ಕುತೂಹಲ ಕೆರಳಿಸಿರುವ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಅಧ್ಯಕ್ಷರ ಆಯ್ಕೆ ನ.20 ರಂದು ನಡೆಯಲಿದೆ. ಟಿ ಎ ಪಿ ಎಂ ಸಿ ಎಸ್ ನಲ್ಲಿನ.13 ನಿರ್ದೇಶಕರ ಸ್ಥಾನದ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆದಿದ್ದಾರೆ.
ಅಧ್ಯಕ್ಷರ ಆಯ್ಕೆಗೆ ಬಹುಮತದ ಗೊಂದಲ ಇಲ್ಲ.ಆದರೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಲ್ಲಿ ಯಾರು ಅಧ್ಯಕ್ಷ ರಾಗಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ 4 ಜನ 2ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಹಾಗಾಗಿ ಹೊಸಬರಿಗೆ ಅಧ್ಯಕ್ಷ ಸ್ಥಾನ ನೀಡಬೇಕೊ ಅಥವಾ ಈ ಹಿಂದಿನ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡುವ ಮೂಲಕ 2ನೇ ನೇರವಾಗಿ ಬಾರಿಗೂ ಆಯ್ಕೆಯಾಗಿ ಬಂದಿರುವ ನಿರ್ದೇಶಕರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಬೇಕೊ ಎನ್ನುವ ಗೊಂದಲ ಪಕ್ಷದ ಮುಖಂಡರಿಗಿದ್ದು, ಅಧ್ಯಕ್ಷಗಿರಿ ಯಾರಿಗೆ ಒಲಿಯುತ್ತದೆಯೋ ಕಾದು ನೋಡಬೇಕಿದೆ.

