ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಡೀ ಜಗತ್ತಿನ ಮನೆ ಮಾತಾಗಿರುವ ಅಮೇರಿಕಾದ ಅಧ್ಯಕ್ಷರ ಆಯ್ಕೆಯ ಚುನಾವಣೆ ದಿನ (ನವಂಬರ್ 5) ಮೊದಲ ಮಂಗಳವಾರ. ಇಂದು ಇಲ್ಲಿ ಒಂದು (polling place )ಪೋಲ್ಲಿಂಗ್ ಬೂತ್ ಗೆ ಸಹಜ ಕುತೂಹಲ ದಿಂದ ಹೋಗಿದ್ದೆ. ಸೋಜಿಗವೆಂಬಂತೆ ಜನಜಂಗುಳಿ ಇಲ್ಲವೇ ಇಲ್ಲ.
ಹಾಗೊಬ್ಬರು ಹೀಗೊಬ್ಬರು ಬರುತ್ತಿದ್ದರು. ನಾನು ಮಗ ಒಳಗೆ ಹೋಗಿ ಒಬ್ಬ ಪೂಲಿಂಗ್ ಆಫೀಸರ್ (ಲೇಡಿ )ನ ಪರಿಚಯಿಸಿಕೊಂಡೆವು. ನಾನೂ ಒಬ್ಬ presiding ಆಫೀಸರ್ ಆಗಿ ಕೆಲಸ ಮಾಡಿದವ ಬಂದ ಉದ್ದೇಶ ತಿಳಿಸಿದೆ ಎಲ್ಲಾ ಟೇಬಲ್ ಸ್ಟಾಫ್ ತೋರಿಸಿ ಕೊಂಡು ಮುಂದೆ ಸಾಗುವಾಗ ನಮ್ಮಲ್ಲಿನ ವ್ಯವಸ್ಥೆಯನ್ನೂ ತಿಳಿಸುತ್ತಾ ನಮಸ್ಕರಿಸಿ ಹೊರಬಂದೆವು.
ಆಕೆಯ ಇಂಗ್ಲಿಷ್ ಅರ್ಥವಾಗಿದ್ದು ಅಷ್ಟಕ್ಕಷ್ಟೇ. ಒಳಗೆ ಹೋಗಿ ಬಂದದ್ದೆ ಖುಷಿಕೊಟ್ಟಿತು. ಬೆರಳಿಗೆ ಶಾಯಿ ಹಚ್ಚುವದಿರಲಿಲ್ಲ. ಅದೊಂದು ಬಿಟ್ಟರೆ ಉಳಿದೆಲ್ಲದು ಒಂದೇ. ಗುಂಪಿಲ್ಲ ಗದ್ದಲವಿಲ್ಲ ಗಲಾಟೆ ಮಾತೇ ಇಲ್ಲ . ಯಾವ ಪೊಲೀಸ್ ವ್ಯವಸ್ಥೆ ಕಾಣಲಿಲ್ಲ.ಗೇಟ್ ಹೊರಗೆ ಮಾತ್ರ ಅಭ್ಯರ್ಥಿಗಳ ಸಣ್ಣ ಸಣ್ಣ ಫಲಕಗಳ ಯಥೇಚ್ಚವಾಗಿ ಅಲ್ಲಲ್ಲಿ ನೆಟ್ಟಿದ್ದರು ಮೊಣಕಾಲು ಮಟ್ಟಕ್ಕೆ.
ಅದೇನೋ ಕಳೆದ ಮೂರು ಬಾರಿಯೂ ಇಲ್ಲಿರುವೆ ಹಾಗಾಗಿ ಓಟoತೂ ಹಾಕoಗಿಲ್ಲ. ಮೊಕ್ತನೋಡಿ ಬರುವ ಮನಸಾಯಿತು .ಸಮೀಪದ ಏರಿಯಾಗಳಲ್ಲಿ ಪ್ರಚಾರದ ಆರ್ಭಟಗಳ ಹೋಗಿ ನೋಡುವ ಮನಸಾಗಲಿಲ್ಲಿ.
ಅಂದ ಹಾಗೆ ಒಮ್ಮೆ ಇಂಗ್ಲೆಂಡ್ ನಲ್ಲಿನ ಚುನಾವಣೆಯಲ್ಲಿ ಯೂ ಇದೇ ವಾತಾವರಣ ಕಂಡಿದ್ದೆ. ಅಲ್ಲಿಯೂ ಈ ದಿನ ಚುನಾವಣೆ ಅನ್ನೋ ಆರ್ಭಟವನ್ನೇ ಕಂಡಿರಲಿಲ್ಲ.
ಆದರೆ ಫಲಿತಾಂಶ ಬಂದಾಗ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ ಎಂದು ಸಲಬೊಮ್ಮನಹಳ್ಳಿ ಸಿದ್ದೇಶ್ವರ ಅವರು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.