ಇಡೀ ದಿನ ಜಿಟಿಜಿಟಿ ಮಳೆ, ಜನ ಹೈರಾಣು

News Desk

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸುರಿವ ಜಿಟಿಜಿಟಿ ಮಳೆಗೆ ತಾಲೂಕಿನ ಜನತೆ ಹೈರಾಣಾಗಿದ್ದಾರೆ.

ಕಳೆದ ಕೆಲ ತಿಂಗಳಿಂದ ಬಾರದ ಮಳೆಯಿಂದ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಶೇಂಗಾ, ರಾಗಿ, ತೊಗರಿ, ಹಲಸಂದಿ, ಹೆಸರು ಇನ್ನಿತರ ಬೆಳೆಗಳು ಒಣಗಿ ಭಾರಿ ನಷ್ಟವಂಟಾಗಿರುವ ಸಮಯದಲ್ಲಿ ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿದು ಮೇವಿನ ಕೊರತೆ ಉಂಟಾಗಲಿದೆ.

- Advertisement - 

ಪಟ್ಟಣ ಹಾಗೂ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುವ ಜಿಟಿಜಿಟಿ ಮಳೆಯಿಂದ ಕೂಲಿ ಕಾರ್ಮಿಕರು , ವ್ಯಾಪಾರಸ್ಥರು ಹಾಗೂ ಬಹುತೇಕರು ಕಂಗಾಲಾಗಿದ್ದಾರೆ. ಎಡಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸವಿಲ್ಲದೆ ಮನೆಗಳಲ್ಲಿಯೇ ಕೂರುವಂತಾಗಿದೆ. ಪ್ರಮುಖವಾಗಿ ತಾಲೂಕಿನ ರೈತರು ಬಿತ್ತನೆ ಮಾಡಿದ ಪ್ರಮುಖ ಶೇಂಗಾ ಹಾಗೂ ಇನ್ನಿತರ  ಬೆಳೆಗಳು ಒಣಗಿರುವುದು ಕೊಳೆತು ಹಾನಿಯಾಗಿ ಮೇವಿನ ಕೊರತೆ ಕಾಡುವ ಸಾಧ್ಯತೆ ಇದೆ.

ಮೊಳಕಾಲ್ಮೂರು ಪಟ್ಟಣ ಹಾಗೂ ತಾಲೂಕಿನ ರಾಂಪುರ, ಕೊಂಡ್ಲಹಳ್ಳಿ ಸೇರಿದಂತೆ ಇನ್ನಿತರ ಪ್ರಮುಖ ಗ್ರಾಮಗಳಲ್ಲಿನ ವ್ಯಾಪಾರ ವಹಿವಾಟು ಬಹುತೇಕ ಕುಂಠಿತಗೊಂಡಿದೆ. ಪಟ್ಟಣದಲ್ಲಿ ಶಾಶ್ವತ ಸಂತೆ ಮಾರುಕಟ್ಟೆಯಿಲ್ಲದೆ ಕಾಮಗಾರಿ ನೆನಗುದಿಗೆ ಬಿದ್ದಿರುವುದರಿಂದ ಹೆದ್ದಾರಿ ಬದಿಯಲ್ಲಿ ನಡೆಯುವ ವಾರದ ಸಂತೆಯ ವ್ಯಾಪಾರವೂ ಕುಂಠಿತವಾಗಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

- Advertisement - 

ಮಳೆಯಲ್ಲಿಯೂ ಪಟ್ಟಣ ಹಾಗೂ ತಾಲೂಕಿನ ಜನತೆ ಅಲ್ಪ ಪ್ರಮಾಣದಲ್ಲಿ ವಾರದ ಸಂತೆಯಲ್ಲಿ ವ್ಯವಹರಿಸಲಾಯಿತು. ಹೋಟೆಲ್, ಹೂವು-ಹಣ್ಣಿನ ಅಂಗಡಿಗಳು, ಕಿರಾಣಿ ಅಂಗಡಿಗಳು, ಬೇಕರಿಗಳು, ಬಟ್ಟೆ ಅಂಗಡಿಗಳು , ಬಂಗಾರದ ಅಂಗಡಿಗಳು ಸೇರಿದಂತೆ ಇನ್ನಿತರ ವ್ಯಾಪಾರವು ಇಳಿಮುಖವಾಗಿತ್ತು. ನಿರಂತರವಾಗಿ ಸರಿಯುವ ಜಿಟಿಜಿಟಿ ಮಳೆಗೆ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಹೆಚ್ಚಿನ ವ್ಯಾಪಾರವಿಲ್ಲದೆ ಆತಂಕಗೊಂಡಿದ್ದಾರೆ.

ಮೋಡ ಕವಿದ ವಾತಾವರಣವಿದ್ದು, ಮಳೆಯು ಸುರಿಯುವ ಮುನ್ಸೂಚನೆ ಇರುವುದರಿಂದ ತಾಲೂಕಿನ ಜನತೆ ಆತಂಕಗೊಂಡಿದ್ದಾರೆ. ಬೆಳಿಗ್ಗೆಯಿಂದಲೂ ನಿರಂತರವಾಗಿ ಸುರಿಯುವ ಜಿಟಿಜಿಟಿ ಮಳೆಗೆ ತಾಲೂಕಿನ ಜನ ಜೀವನ ಅಸ್ತವ್ಯಸ್ತವಾಗಿದೆ.

 

 

 

Share This Article
error: Content is protected !!
";