ಎಲ್ಲಾ ಧರ್ಮಗಳ ಸಾರ ಮಂಕುತಿಮ್ಮನ ಕಗ್ಗದಲ್ಲಿದೆ: ನ್ಯಾಯಧೀಶ ಅಶ್ವತ್ಥ ನಾರಾಯಣಗೌಡ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸ್ಥಾಪಕ ಅಧ್ಯಕ್ಷರಾದ ಡಿವಿಜಿ ಅವರ 138ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಚ್. ಅಶ್ವತ್ಥ ನಾರಾಯಣ ಅವರು ಮಾತನಾಡಿ, ಡಿವಿಜಿ ಅವರ ಮಂಕುತಿಮ್ಮನ ಕಗ್ಗ ದಲ್ಲಿ ಎಲ್ಲಾ ಧರ್ಮಗಳ ಮತ್ತು ಬದುಕಿನ ಸಾರವೂ ಅಡಗಿದೆ ಎಂದು ಹೇಳಿದರು.

ಡಿ.ವಿ.ಜಿ. ಅವರು ತಮ್ಮ ಕೃತಿಗಳ ಮೂಲಕ ಕಾರ್ಮಿಕ ಸಾರವನ್ನು ಸಮಾಜಕ್ಕೆ ಧಾರೆ ಎರೆದು ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಅವರ ವ್ಯಕ್ತಿತ್ವ ಸಮಾಜದ ಭಾಗವಾಗಿರುವ ನಮಗೆಲ್ಲರಿಗೂ ಉತ್ತಮ ಸಂದೇಶ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಭೂ ಕಬಳಿಕೆ ನ್ಯಾಯಾಂಗ ಸದಸ್ಯರಾದ ನಾಗಲಿಂಗನ ಗೌಡ ಪಾಟೀಲ್, ಪತ್ರಿಕಾರಂಗ ಮತ್ತು ನ್ಯಾಯಾಂಗ ಅನ್ಯೋನ್ಯವಾಗಿರಬೇಕು. ಸರ್ಕಾರದ ಆಸ್ತಿ ಕಬಳಿಸಿದವರ ಕುರಿತು ಮಾಹಿತಿ ದೊರೆತರೆ ಅದನ್ನು ತಿಳಿಸಲು ಪತ್ರಕರ್ತರೂ ಬದ್ಧರಾಗಬೇಕು ಎಂದರು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮಾತನಾಡಿ, 1932ರಲ್ಲಿ ಸ್ಥಾಪಿತವಾದ ಕಾರ್ಯನಿರತ ಪತ್ರಕರ್ತರ ಸಂಘವು ಹತ್ತು ಸಾವಿರದಷ್ಟು ಸದಸ್ಯರನ್ನು ಹೊಂದಿದ್ದು, ಬೃಹತ್ ಸಂಘಟನೆಯಾಗಿದೆ.ಡಿವಿಜಿ ಅವರ ಆದರ್ಶದ ಜೀವನ ನಮ್ಮೆಲ್ಲರಿಗೂ ಆದರ್ಶನೀಯ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ. ಶಂಭುಲಿಂಗ ಸೇರಿದಂತೆ ಹಲವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸತ್ಯನಾರಾಯಣ, ಉಪಾಧ್ಯಕ್ಷ ಜಿಕ್ರಿಯಾ, ಎ.ಬಿ. ಶಿವರಾಜ್, ಕೆ. ಹರೀಶ್, ಸದಸ್ಯರಾದ ಕೆ. ಶಶಿಕಲಾ, ಶಿವಾನಂದ, ಸುಂದರೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರಮೇಶ್ ಸೇರಿದಂತೆ ಹಲವಾರು ಜಿಲ್ಲಾ ಪದಾಧಿಕಾರಿಗಳು, ಸಮಿತಿ ಸದಸ್ಯರು ಮತ್ತು ಸಂಘದ ಇತರ ಸದಸ್ಯರೂ ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";