ಭಗವದ್ಗೀತೆಯ ಸಾರ ಅರಿತರೆ ಬದುಕು ಸಾರ್ಥಕ-ಡಾ.ಬಿ.ವಿ ಆರತಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸ್ವಾರ್ಥ ಪರವಾಗಿ ಆಲೋಚಿಸಿ
, ಅದರಂತೆಯೇ ನಡೆದುಕೊಳ್ಳುವ ಮೂಲಕ ನಮ್ಮ ಕರ್ಮ ಸಾಸುವುದನ್ನು ಮರೆಯುತ್ತಿದ್ದೇವೆ. ಈ ದಿಸೆಯಲ್ಲಿ ಬದುಕಿನ ಸಾರ್ಥ ಕತೆಗೆ ಶಂಕರಾಚಾರ್ಯರು ಪ್ರತಿಪಾದಿಸಿದ ಉಪನಿಷತ್ತುಗಳು, ಬ್ರಹ್ಮ ಸೂತ್ರ, ಭಗವದ್ಗೀತೆಗಳ ಸಾರವನ್ನು ಅರಿಯುವ ಮೂಲಕ ಬದುಕನ್ನು ಸಾರ್ಥಕ. ಪಡಿಸಿಕೊಳ್ಳಬೇಕಿದೆ ಎಂದು ವಿಭು ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷೆ ಡಾ.ಬಿ.ವಿ.ಆರತಿ ಹೇಳಿದ್ದಾರೆ.

ನಗರದ ಶಾರದಾ ಶಂಕರ ಸದನದಲ್ಲಿ ಶಾರದಾ ಶಂಕರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಅ ಯೋಜನೆ ಮಾಡಲಾದ  ಜಗದ್ಗುರು ಶಂಕರಾಚಾರ್ಯರ ಮತ್ತು ಶ್ರೀ ರಾಮಾನುಜಾಚಾರ್ಯರ ಜಯಂತ್ಯುತ್ಸವ ಸಪ್ತಾಹ ಕಾರ್ಯಕ್ರಮದಲ್ಲಿ ವಿವೇಕ ಚೂಡಾಮಣಿ ವಿಚಾರ ಕುರಿತು ಮಾತನಾಡಿದರು.

ನಮ್ಮ ಬದುಕಿನ ಜಂಜಾಟದಲ್ಲಿ ನಾವು ಅಗತ್ಯವಾಗಿ ಪಾಲಿಸಬೇಕಾದ ಸೂತ್ರಗಳ ಕಡೆ ಗಮನ ನೀಡುತ್ತಿಲ್ಲ. ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಗಳು ಮರೆಯಾಗುತ್ತಿದ್ದು, ಇವುಗಳನ್ನು ಪಾಲಿಸಿ, ಪಸರಿಸುವತ್ತ ಗಮನ ನೀಡಬೇಕಿದೆ. ಪ್ಲಾಟ್ ಸಂಸ್ಕೃತಿಯಲ್ಲಿ ನಮ್ಮ ಮಾನವೀಯ ಮೌಲ್ಯಗಳು ಹಾಗೂ ಸಮಾಜ ಮುಖಿ ಚಿಂತನೆಗಳು ಮರೆಯಾಗುತ್ತಿವೆ. ನಮ್ಮ ವೇದ ಉಪನಿಷತ್ತುಗಳ ಸತ್ವಗಳನ್ನು ಅರ್ಥಮಾಡಿಕೊಳ್ಳದೇ ಹೋಗುತ್ತಿದ್ದೇವೆ.

ನಮಗೆ ಎಷ್ಟೇ ಪಾಂಡಿತ್ಯ. ವಿದ್ದರೂ, ಅದು ಸರಿಯಾದ ಕಾಲದಲ್ಲಿ ಬಳಕೆ ಯಾಗದಿದ್ದರೆ ಏನೂ ಪ್ರಯೋಜನವಿಲ್ಲ. ಸಮಾಜದಲ್ಲಿ ಹೇಗೆ ಬದುಕಬೇಕು. ಇಲ್ಲಿ ನಮ್ಮ ಅಸ್ತಿತ್ವವೇನು ಎನ್ನುವುದರನ್ನು ಚಿಂತಿಸಬೇಕು. ನಾವು ಮಾಡಲೇ ಬೇಕಾದ ಕರ್ಮ, ಹೊಣೆಗಾರಿಕೆಯಿಂದ ನುಣುಚಿಕೊಳ್ಳದೇ ಲೋಕ ಕಲ್ಯಾಣ ಮಾಡಬೇಕು. ಬ್ರಹ್ಮ ಸೂತ್ರವನ್ನು ಅರಿಯಬೇಕು. ಹಿರಿಯರು ಹೇಳಿರುವ ವೇದಾಂತಗಳನ್ನು ಉಳಿಸಿಕೊಳ್ಳಬೇಕು. ಲೋಕಕಲ್ಯಾಣಕ್ಕಾಗಿ ಸೇವಾ ಕಾವ್ಯಗಳನ್ನು ಮಾಡಬೇಕು.

ನಮ್ಮ ಪಾಡಿಗೆ ನಮ್ಮ ಕರ್ಮವನ್ನು ನಾವು ಸರಿಯಾಗಿ ಮಾಡಿದರೆ ಭಗವಂತ ಅದಕ್ಕೆ ತಕ್ಕ ಪ್ರತಿಫಲ ನೀಡುತ್ತಾನೆ. ಲೋಕದ ಪ್ರಶಂಸೆಗೆ ನಾವು ಕಾಯುವುದು ಬೇಡ. ಭಗವದ್ಗೀತೆ ಯಲ್ಲಿಯೂ ಕೃಷ್ಣ ಇದನ್ನೇ ಹೇಳಿರುವುದು. ಅಂತೆಯೇ ಶಂಕರಾಚಾರ್ಯರ ಸಹ ವಿವೇಕ ಚಿಂತಾಮಣಿಯಲ್ಲಿ ಇದನ್ನೇ ಪ್ರತಿಪಾದಿಸಿದ್ದಾರೆ. ೪ ಪ್ರಸ್ತಾವತ್ರಯಕ್ಕೆ ಭಾಷ್ಯ ಬರೆಯ ಬೇಕಿದ್ದು, ಈ ದಿಸೆಯಲ್ಲಿ ವಿವೇಕ ಚಿಂತಾಮಣಿಯ ಅನುಸಂಧಾನ ಮಾಡಿಕೊಳ್ಳುವ ಮೂಲಕ ಮಾಡಲೇಬೇಕಾದ ನಮ್ಮ ಕರ್ಮವನ್ನು ಮಾಡಿದರೆ ಅದು ಶಂಕರಾಚಾರ್ಯರಿಗೆ ಸಲ್ಲಿಸುವ ಕಾಣಿಕೆ ಯಾಗಿದೆ ಎಂದರು.

 ಈ ಕಾರ್ಯ ಕ್ರಮದಲ್ಲಿ ಶಾರದಾ ಸಂಕರ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎ.ಆರ್.ನಾಗರಾಜನ್, ಕಾರ್ಯದರ್ಶಿ ಟಿ.ಎಸ್.ರಾಘವೇಂದ್ರರಾವ್, ಆರ್ಚಕ ಡಿ.ಎಸ್.ಸೋಮಶೇಖರ ಮೊದಲಾದವರು ಹಾಜರಿದ್ದರು.

 

Share This Article
error: Content is protected !!
";