ಕಾಡಾನೆಗಳ ಮಿತಿಮೀರಿದ ಅಟ್ಟಹಾಸ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಾಡಾನೆಗಳ ಅಟ್ಟಹಾಸ ಮಿತಿಮೀರಿದೆ
, ಆದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾತ್ರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಆರೋಪಿಸಿದರು.
ಕಾಡಾನೆಗಳ ದಾಳಿಯಿಂದ ದಿನಬೆಳಗಾದರೆ ಸಾವು-ನೋವಿನ ಸುದ್ದಿಗಳೇ ಕೇಳಿಬರುತ್ತಿದ್ದರೂ
, ಅರಣ್ಯ ಇಲಾಖೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದೆಯೇ?

ಕೇವಲ ಆರು ದಿನಗಳ ಹಿಂದೆ ಚಿಕ್ಕಮಗಳೂರಿಗೆ ಕೆಲಸ ಅರಸಿಕೊಂಡು ಬಂದಿದ್ದ ತಿಳವಳ್ಳಿಯ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಆ ರಕ್ತದ ಕಲೆ ಮಾಸುವ ಮುನ್ನವೇ ಇಂದು ಮತ್ತೆ ಅದೇ ಪ್ರದೇಶದಲ್ಲಿ ಹೊಸಪೇಟೆ ತಾಲೂಕಿನ ಬೋರಮ್ಮ ಎಂಬುವವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಬಡವರ ಪ್ರಾಣವೆಂದರೆ ಈ ಸರ್ಕಾರಕ್ಕೆ ಅಷ್ಟು ಅಗ್ಗವೇ? ಎಂದು ರವಿ ಅವರು ಕಿಡಿಕಾರಿದ್ದಾರೆ.

- Advertisement - 

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಸಭೆ-ಸಮಾರಂಭಗಳಲ್ಲಿ ನಾವು ರೈತಪರ, ನಾವು ಕಾರ್ಮಿಕರ ಪರಎಂದು ಭಾಷಣ ಬಿಗಿಯುವುದು ಸುಲಭ. ಆದರೆ ಇಂದು ಅದೇ ರೈತರು ಮತ್ತು ಕಾರ್ಮಿಕರು ಹೊಟ್ಟೆಪಾಡಿಗಾಗಿ ತೋಟಕ್ಕೆ ಹೋದರೆ ಸಂಜೆ ಮನೆಗೆ ಮರಳುವ ಗ್ಯಾರಂಟಿ ಇಲ್ಲ.

 ಅರಣ್ಯ ಸಚಿವರೇ, ‘ಕ್ರಮ ಕೈಗೊಳ್ಳುತ್ತೇವೆಎನ್ನುವ ನಿಮ್ಮ ಬಾಯಿ ಮಾತಿನ ಭರವಸೆಗಳು ಜನರ ಪ್ರಾಣ ಉಳಿಸುತ್ತಿಲ್ಲ. ಆನೆಗಳ ಹಾವಳಿ ತಡೆಯಲು ವೈಜ್ಞಾನಿಕ ಕ್ರಮಗಳಿಲ್ಲ. ಇನ್ನೆಷ್ಟು ಹೆಣಗಳು ಉರುಳಿದ ಮೇಲೆ ನಿಮ್ಮ ಇಲಾಖೆ ಎಚ್ಚೆತ್ತುಕೊಳ್ಳುತ್ತದೆ? ತಕ್ಷಣ ಸೂಕ್ತ ಕ್ರಮ ಕೈಗೊಂಡು ಪರಿಹಾರ ಒದಗಿಸಿ. ಜನರ ತಾಳ್ಮೆ ಪರೀಕ್ಷಿಸಬೇಡಿ. ಬಡವರ ಜೀವಕ್ಕೆ ಬೆಲೆ ನೀಡಿ.

- Advertisement - 

ರಾಜ್ಯದಲ್ಲಿ ಕಾಡಾನೆಗಳ ಅಟ್ಟಹಾಸ ಮಿತಿಮೀರಿದೆ, ಆದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾತ್ರ ಕುಂಭಕರ್ಣ ನಿದ್ದೆಯಲ್ಲಿದೆ. ದಿನಬೆಳಗಾದರೆ ಸಾವು-ನೋವಿನ ಸುದ್ದಿಗಳೇ ಕೇಳಿಬರುತ್ತಿದ್ದರೂ, ಅರಣ್ಯ ಇಲಾಖೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದೆಯೇ?

ಕೇವಲ ಆರು ದಿನಗಳ ಹಿಂದೆ ಚಿಕ್ಕಮಗಳೂರಿಗೆ ಕೆಲಸ ಅರಸಿಕೊಂಡು ಬಂದಿದ್ದ ತಿಳವಳ್ಳಿಯ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಆ ರಕ್ತದ ಕಲೆ ಮಾಸುವ ಮುನ್ನವೇ ಇಂದು ಮತ್ತೆ ಅದೇ ಪ್ರದೇಶದಲ್ಲಿ ಹೊಸಪೇಟೆ ತಾಲೂಕಿನ ಬೋರಮ್ಮ ಎಂಬುವವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಬಡವರ ಪ್ರಾಣವೆಂದರೆ ಈ ಸರ್ಕಾರಕ್ಕೆ ಅಷ್ಟು ಅಗ್ಗವೇ?

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಸಭೆ-ಸಮಾರಂಭಗಳಲ್ಲಿ ನಾವು ರೈತಪರ, ನಾವು ಕಾರ್ಮಿಕರ ಪರಎಂದು ಭಾಷಣ ಬಿಗಿಯುವುದು ಸುಲಭ. ಆದರೆ ಇಂದು ಅದೇ ರೈತರು ಮತ್ತು ಕಾರ್ಮಿಕರು ಹೊಟ್ಟೆಪಾಡಿಗಾಗಿ ತೋಟಕ್ಕೆ ಹೋದರೆ ಸಂಜೆ ಮನೆಗೆ ಮರಳುವ ಗ್ಯಾರಂಟಿ ಇಲ್ಲ ಎಂದು ರವಿ ಅವರು ವಾಗ್ದಾಳಿ ಮಾಡಿದರು.

 ಅರಣ್ಯ ಸಚಿವರೇ, ‘ಕ್ರಮ ಕೈಗೊಳ್ಳುತ್ತೇವೆಎನ್ನುವ ನಿಮ್ಮ ಬಾಯಿ ಮಾತಿನ ಭರವಸೆಗಳು ಜನರ ಪ್ರಾಣ ಉಳಿಸುತ್ತಿಲ್ಲ. ಆನೆಗಳ ಹಾವಳಿ ತಡೆಯಲು ವೈಜ್ಞಾನಿಕ ಕ್ರಮಗಳಿಲ್ಲ. ಇನ್ನೆಷ್ಟು ಹೆಣಗಳು ಉರುಳಿದ ಮೇಲೆ ನಿಮ್ಮ ಇಲಾಖೆ ಎಚ್ಚೆತ್ತುಕೊಳ್ಳುತ್ತದೆ? ತಕ್ಷಣ ಸೂಕ್ತ ಕ್ರಮ ಕೈಗೊಂಡು ಪರಿಹಾರ ಒದಗಿಸಿ. ಜನರ ತಾಳ್ಮೆ ಪರೀಕ್ಷಿಸಬೇಡಿ. ಬಡವರ ಜೀವಕ್ಕೆ ಬೆಲೆ ನೀಡಿ ಎಂದು ಸಿ.ಟಿ ರವಿ ತಾಕೀತು ಮಾಡಿದ್ದಾರೆ.

 

Share This Article
error: Content is protected !!
";