ಉದ್ಯಮದ ಪಿತಾಮಹ ರತನ್ ಟಾಟಾ-ರಘುಗೌಡ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀ ರತನ್ ಟಾಟಾ ಭಾರತ ದೇಶದ ಪ್ರಖ್ಯಾತ ಉದ್ಯಮಿಗಳು 86 ವರ್ಷಗಳ ವಯಸ್ಸಿನವರಾದ ಇವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಬುಧವಾರ ತಡ ರಾತ್ರಿ ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

 ರತನ್  ಟಾಟಾ ಅವರು ದೇಶದಲ್ಲಿ ಅನೇಕ ಉದ್ಯಮಗಳನ್ನು ಟಾಟಾ ಹೆಸರಿನಲ್ಲಿ ಸ್ಥಾಪನೆ ಮಾಡುವ ಮೂಲಕ ಭಾರತ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಕಾರಣವಾದ ಶ್ರೇಷ್ಠ ಉದ್ಯಮಿ ಎಂದು ಹೆಮ್ಮೆಯಿಂದ ಹೇಳಬಹುದು.

ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೆ ಏರಿಸಿ, ಕಂಪೆನಿಯ ಲಾಭಾಂಶವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದರು.

ಭಾರತ ದೇಶದ ಅಡಳಿತ ಕೇಂದ್ರವಾದ ಲೋಕಸಭಾ ಸಂಸತ್ ಭವನವನ್ನು ಸರ್ಕಾರ ನೀಡಿದ ಅವಧಿಯಲ್ಲಿಯೇ ಕಳೆದ ವರ್ಷ ನಿರ್ಮಾಣ ಮಾಡಿ ಲೋಕಕಲ್ಯಾಣಕ್ಕಾಗಿ ಅರ್ಪಿಸಿದ  ಕೀರ್ತಿ ಟಾಟಾ ಸಂಸ್ಥೆಗೆ ಸಲುತ್ತದೆ.

ಜನಸಾಮಾನ್ಯರು ಬಳಸುವ ಪ್ರತಿಯೊಂದು ದಿನಚರಿ ವಸ್ತುವನ್ನು ಉತ್ತಮ ಗುಣಮಟ್ಟದಲ್ಲಿ ತಯಾರಿಸಿ ಆ ವಸ್ತುಗಳನ್ನು ಜನಸಾಮಾನ್ಯರಿಗೆ ಎಟಕುವ ಬೆಲೆಗೆ ನೀಡುವ ಕೀರ್ತಿ ಟಾಟಾ ಸಂಸ್ಥೆಗೆ ಸಲುತ್ತದೆ.

 ದೇಶದ ಪ್ರತಿಯೊಬ್ಬ ನಾಗರಿಕರ ಕುಟುಂಬ ಕಾರಿನಲ್ಲಿ ಓಡಾಡಬೇಕು ಎಂಬ ಮಹತ್ವಾಕಾಂಕ್ಷೆಯ ದೃಷ್ಟಿಯಿಂದ ಒಂದು ಲಕ್ಷ ರೂಪಾಯಿಯ ಬೆಲೆ ಬಾಳುವ ಟಾಟಾ ನ್ಯಾನೋ ಕಾರನ್ನು ಜನಸಾಮಾನ್ಯರಿಗೆ ಅರ್ಪಿಸಿದರು.

ಟಾಟಾ ಸಂಸ್ಥೆಯ ಅಡಿಯಲ್ಲಿ ದೇಶದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದರು. ದೇಶದ ಆರ್ಥಿಕತೆ ಹೆಚ್ಚಲು ಟಾಟಾ ಸಂಸ್ಥೆ ಕಾರಣವಾಗಿದೆ. ದೇಶದ ಕೋಟ್ಯಂತರ ಜನರ ವಿಶ್ವಾಸವನ್ನು ಗೆದ್ದಿರುವ ರತನ್ ಟಾಟಾ ಅವರಿಗೆ ದೇಶದ ಪ್ರತಿಷ್ಟಿತ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಲಭಿಸಿವೆ.

ದೇಶದ ಪ್ರಶಸ್ತಿಗಳೊಂದಿಗೆ ಇನ್ನು ಅನೇಕ ದೇಶ ವಿದೇಶಗಳ ಪ್ರಶಸ್ತಿಗಳು ಲಭಿಸಿವೆ. ರತನ್ ಟಾಟಾ ಅವರು ಅವಿವಾಹಿತರಾಗಿದ್ದರು. ಟಾಟಾ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
ಲೇಖನ-ರಘು ಗೌಡ 9916101265 

- Advertisement -  - Advertisement - 
Share This Article
error: Content is protected !!
";