ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಪುತ್ರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನ ಕೊಲೆಯ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸದುರ್ಗ ತಾಲೂಕಿನ ಸಣ್ಣ ಕಿಟ್ಟದಹಳ್ಳಿಯ ಪೂರ್ಣಿಮಾ ಎನ್ನುವರು ತನ್ನ ಗಂಡ ಚಿಕ್ಕಣ್ಣನ ಕೊಲೆ ಆಗಿರುವ ಕುರಿತು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೇ-10 ರಂದು ಸಣ್ಣ ಕಿಟ್ಟದ ಹಳ್ಳಿಯ ತೋಟದ ಸಮೀಪದಲ್ಲಿ ಚಿಕ್ಕಣ್ಣ ಇವರನ್ನ ಕಲ್ಲಿನಿಂದ ಹೊಡೆದು ನಂತರ ಸೀರೆಯಿಂದ ನೇಣು ಬಿಗಿದು ಕೊಲೆ ಮಾಡಿದ್ದು ಈ ಕುರಿತು ಪತ್ನಿ ಪೂರ್ಣಿಮಾ ಅವರು ದೂರು ನೀಡಿದ್ದರು.
ದೂರು ಆಧರಿಸಿ ಗೌಪ್ಯ ತನಿಖೆ ಆರಂಭಿಸಿದ ಪೊಲೀಸರು ಮೃತ ಚಿಕ್ಕಣ್ಣನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ 1ನೇ ಪ್ರಮುಖ ಆರೋಪಿ ಕೋಮಲ(25), 2ನೇ ಆರೋಪಿ ಈಕೆಯ ಅಣ್ಣ ಗಿರೀಶ್(26), 3ನೇ ಆರೋಪಿ ಈಕೆಯ ತಂದೆ ಮೂಡಲಗಿರಿಯಪ್ಪ(52) ಈ ಮೂರು ಜನ ಕೊಲೆ ಆರೋಪಿಗಳನ್ನು ಹೊಸದುರ್ಗ ಪೊಲೀಸ್ ಬಂಧಿಸಿ ತನಿಖೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತ ಚಿಕ್ಕಣ್ಣ ಮತ್ತು 1ನೇ ಆರೋಪಿ ಕೋಮಲ ಮಧ್ಯ ಅಕ್ರಮ ಸಂಬಂಧ ಇದ್ದು ಈ ಕುರಿತು ಸಾಕಷ್ಟು ಸಲ ಬುದ್ದಿವಾದ ಹೇಳಿದ್ದರೂ ಕೋಮಲ ಮತ್ತು ಚಿಕ್ಕಣ್ಣ ಇಬ್ಬರು ಸಂಪರ್ಕದಿಂದ ದೂರ ಸರಿದಿರಲಿಲ್ಲ ಎನ್ನಲಾಗಿದ್ದು ಹಾಗಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.