ಸಂಕ್ರಾಂತಿ ಮಿಲನ ಕೂಟದಲ್ಲಿ ಹಬ್ಬದ ವಾತಾವರಣ ಸೃಷ್ಠಿ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಊರಿಂದ ಊರಿಗೆ ತನ್ನವರನ್ನು ತೊರೆದು ಬದುಕು ಕಟ್ಟಿಕೊಳ್ಳಲು ಬಂದು ದೆಹಲಿಯಲ್ಲಿ ವಾಸಿಸುತ್ತಿರುವ ಎಲ್ಲಾ ಕನ್ನಡಿಗರನ್ನು ಒಟ್ಟಿಗೆ ಸೇರಿಸಿ ಮನೆಯಂತಹ ವಾತಾವರಣವನ್ನು ಸೃಷ್ಟಿಸಿದ ದೆಹಲಿ ಕನ್ನಡ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ದೆಹಲಿಯಲ್ಲಿನ ಅಕ್ಬರ್ ರಸ್ತೆಯಲ್ಲಿರುವ ಸರಕಾರಿ ನಿವಾಸದಲ್ಲಿ ದೆಹಲಿ ಕನ್ನಡಿಗರಿಗಾಗಿ ಸಂಕ್ರಾಂತಿ ಮಿಲನ ಕೂಟವನ್ನು ಏರ್ಪಡಿಸಿದ್ದರು.

 ಆ ವಾತಾವರಣವು ಹಬ್ಬದ ಸೊಬಗನ್ನು ಹೆಚ್ಚಿಸುವಂತಹ ಮತ್ತು ಒಂದು ಮದುವೆ ಕಾರ್ಯಕ್ರಮದಂತೆ ವರ್ಣಾತೀತವಾಗಿತ್ತು.

ಕೇಂದ್ರ ಸಚಿವ ಜೋಶಿ ಅವರು ಮಾತನಾಡಿ ದೆಹಲಿಯಲ್ಲಿರುವ ನಮ್ಮ ಕನ್ನಡಿಗರನ್ನು ಕರೆದು ಹಬ್ಬವನ್ನು ಆಚರಿಸುವ ಇಚ್ಛೆ ಇದ್ದುದ್ದರಿಂದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ್ ಅವರ ಮೂಲಕ ತಮ್ಮೆಲ್ಲರಿಗೂ ಆಹ್ವಾನ ನೀಡಿದ್ದೆ. ಅದಕ್ಕೆ ನೀವೆಲ್ಲರೂ ಬಂದಿದ್ದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿಯೂ ಈ ರೀತಿಯ ಇನ್ನು ಹಲವು ಕಾರ್ಯಕ್ರಮ ಏರ್ಪಡಿಸುವ ಉದ್ದೇಶವಿದೆ. ಹೀಗೆ ನೀವು ಬಂದು ಪಾಲ್ಗೊಳ್ಳಬೇಕೆಂದು ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ್ ಅವರು ಸಂಘದ ವತಿಯಿಂದ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು. ಮತ್ತು ಮಂತ್ರಿಗಳ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರು ಫೋಟೋ ತೆಗೆಸಿಕೊಂಡರು ನಂತರ ನಮ್ಮ ನಾಡಲ್ಲಿ ಸಿಗುವಂತಹ ಹಲವು ಖಾದ್ಯಗಳು ತಿಂಡಿ ತಿನಿಸುಗಳ ಭಾರೀ ಭೋಜನದ ವ್ಯವಸ್ಥೆ ಮಾಡಿದ್ದರು. ಎಲ್ಲಾ ಕನ್ನಡಿಗರು ಭೋಜನ ಸವಿದರು ಎಂದು ನವ ದೆಹಲಿ ಉಪ ನಿರೀಕ್ಷಕರಾದ ವೆಂಕಟೇಶ ಹೆಚ್ ಚಿತ್ರದುರ್ಗ ಅವರು ಮಾಹಿತಿ ನೀಡಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";