ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಯುದ್ಧದ ಬೆಂಕಿ – ಸಾಮಾನ್ಯರ ಹೊಟ್ಟೆಗೆ ಹೊರೆ”.
ಕೊರೋನಾ ನಂತರ ಮತ್ತೆ ಸಂಕಷ್ಟದ ನೆರಳು: ಕಮರ್ಷಿಯಲ್ ಗ್ಯಾಸ್, ದರ ಏರಿಕೆಯಿಂದ ಬದುಕು ಬಿಕ್ಕಟ್ಟು.
ಒಂದು ಕಾಲದಲ್ಲಿ “ಕೊರೋನಾ” ಎಂಬ ಅತೃಪ್ತ ದುರಂತ ಮನುಕುಲವನ್ನೇ ತತ್ತರಗೊಳಿಸಿತು. ಅಂದು ಲಾಕ್‌ಡೌನ್, ಉದ್ಯೋಗ ಕಳೆತ, ಹಸಿವು — ಇವೆಲ್ಲವೂ ಸಾಮಾನ್ಯ ಜನರ ಜೀವನವನ್ನು ನಡುಗಿಸಿತು. ಇಂದು ಮತ್ತೆ ಅದೇ ರೀತಿಯ ಭೀತಿ — ಆದರೆ ಈ ಬಾರಿ ಕಾರಣ ಹೋರ ದೇಶಗಳ ಯುದ್ಧಗಳು.
ಡಿಮ್ಯಾಂಡ್‌ಇದೆ, ಸಪ್ಲೈ ಇಲ್ಲ – ಬದುಕು ತೂಗುಕತ್ತಿಯ ಮೇಲೆ……
ಗ್ಯಾಸ್, ನಮ್ಮ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗಗಳು. ಆದರೆ ಇಂದಿನ ಪರಿಸ್ಥಿತಿ ಏನಂತೀರಾ?
ಕಮರ್ಷಿಯಲ್‌ಗ್ಯಾಸ್‌ಸಿಲಿಂಡರ್‌ಬೆಲೆ ₹1800 ರಿಂದ ₹5000–6000ಕ್ಕೆ ಏರಿಕೆ ಸರಬರಾಜು ಕೊರತೆಯಿಂದ ಕೃತಕ ಅಭಾವ, ಅಗತ್ಯವಿರುವವರು “ಎಷ್ಟು ಕೇಳಿದರೂ ಕೊಡಲೇಬೇಕು” ಎಂಬ ಸ್ಥಿತಿ!.
ಹೋಟೆಲ್‌ಬಿಲ್– ಹೊಟ್ಟೆಗೆ ಹೊರೆ, ಒಂದು ಕಾಲದಲ್ಲಿ ₹20 ಇದ್ದ ಇಡ್ಲಿ – ಈಗ ₹35. ₹50 ಇದ್ದ ರೈಸ್‌ಬಾತ್– ₹75 ಮೀರಿದೆ. ₹90 ಇದ್ದ ಮೀಲ್ಸ್– ₹120 ತಲುಪಿದೆ.
ಪ್ರಶ್ನೆ ಏನೆಂದರೆ ಒಂದೇ ಬಾರಿ ಗ್ಯಾಸ್‌ಬಳಸಿ 40–50 ವಡೆ, 50ಕ್ಕೂ ಹೆಚ್ಚು ಇಡ್ಲಿ ತಯಾರಿಸಬಹುದು. ಹಾಗಿದ್ದರೆ ಒಂದೊಂದು ಐಟಂ ಮೇಲೆ ₹15–25 ಹೆಚ್ಚಳ ಯಾವ ಲೆಕ್ಕದಲ್ಲಿ? ಇದು ಖರ್ಚಿನ ಏರಿಕೆಯ ಪರಿಣಾಮವೇ? ಅಥವಾ ಸಂಕಷ್ಟದ ಸಮಯದ ಅವಕಾಶಶೋಧನೆಯೇ?.
ಸಣ್ಣ ವ್ಯಾಪಾರಿಗಳ ಸಂಕಷ್ಟ. ಅನೆಕ ಸಣ್ಣಪುಟ್ಟ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಫುಟ್ಪಾತ್‌ವ್ಯಾಪಾರಿಗಳು LPG ಖರೀದಿಸಲು ಸಾಧ್ಯವಾಗದೆ ಕೆಲಸ ನಿಲ್ಲಿಸಿದ್ದಾರೆ.
ಆಟೋ ಚಾಲಕರು LPG ಸ್ಟೇಷನ್‌ಮುಂದೆ ಕಿಲೋಮೀಟರ್‌ಸಾಲಿನಲ್ಲಿ ದಿನಕ್ಕೆ ₹700–1000 ಸಂಪಾದನೆ ಮಾಡುತ್ತಿದ್ದವರು ಇಂದು ಸಂಕಷ್ಟದಲ್ಲಿ.
“ಅಂದಿನ ದುಡಿಮೆ – ಅಂದಿನ ಊಟ” ಎಂಬ ಜೀವನ ಶೈಲಿ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಎಲ್ಲರೂ ಒಂದೇ ರೀತಿ ಅಲ್ಲ. ಕೆಲವು ಹೋಟೆಲ್‌ಗಳು ಮಾನವೀಯತೆ ಉಳಿಸಿಕೊಂಡಿವೆ. ಕೇವಲ 10–15% ದರ ಏರಿಕೆ, ಗ್ರಾಹಕರ ಪರಿಸ್ಥಿತಿ ಅರ್ಥ ಮಾಡಿಕೊಂಡಿವೆ.
ಆದರೆ ಇನ್ನೂ ಕೆಲವು 50% ಕ್ಕೂ ಹೆಚ್ಚು ದರ ಏರಿಕೆ. “ಸಿಕ್ಕಿದ್ದೇ ಅವಕಾಶ” ಅನ್ನೋ ಮನೋಭಾವ, ಆನ್‌ಲೈನ್‌ಆಪ್‌ಗಳ ಹೆಚ್ಚುವರಿ ಹೊರೆ, ಫುಡ್‌ಡಿಲಿವರಿ ಆಪ್‌ಗಳು ತಮ್ಮ ಕಮಿಷನ್‌ಸೇರಿಸಿ ದರಗಳನ್ನು ಇನ್ನಷ್ಟು ಏರಿಕೆ ಮಾಡುತ್ತಿವೆ. ಅಂತಿಮವಾಗಿ ಹೊರೆ ಯಾರ ಮೇಲೇ?. ಸಾಮಾನ್ಯ ಗ್ರಾಹಕರ ಮೇಲೇ!.
ಕೊರೋನಾ ನೆನಪಾಗಿಸುವ ಸ್ಥಿತಿ-ಕೊರೋನಾ ಸಮಯದಲ್ಲಿ ಕಂಡಿದ್ದೇವೆ. ಉದ್ಯೋಗ ಕಳೆತ, ಸಣ್ಣ ವ್ಯಾಪಾರಿಗಳ ನಾಶ, ಮಧ್ಯಮ ವರ್ಗದ ಕುಸಿತ.
ಇಂದು ಮತ್ತೆ ಅದೇ ಚಕ್ರ ಮರುಕಳಿಸುತ್ತಿದೆಯೇ? ಮುಖ್ಯ ಪ್ರಶ್ನೆ-ನಾಳೆ ಗ್ಯಾಸ್‌ಬೆಲೆ ಕಡಿಮೆಯಾದರೆ, ಇಂದಿನ ದರಗಳು ಕಡಿಮೆಯಾಗುತ್ತವೆಯಾ?, ಅಥವಾ ಇದು ಹೊಸ “ನಾರ್ಮಲ್” ಆಗಿಬಿಡುತ್ತದೆಯಾ?.
ಕೊನೆಯ ಮಾತು – ಮಾನವೀಯತೆ ಉಳಿಯಲಿ.
ಹಸಿದವರಿಗೆ ಅನ್ನ ನೀಡುವುದು ವ್ಯಾಪಾರ ಮಾತ್ರವಲ್ಲ, ಅದು ಧರ್ಮವೂ ಹೌದು. ಈ ಸಂಕಷ್ಟದಲ್ಲಿ ಸ್ವಲ್ಪ ಲಾಭ ಕಡಿಮೆಯಾದರೂ ಪರವಾಗಿಲ್ಲ. ಗ್ರಾಹಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ “ಡಿಮ್ಯಾಂಡ್–ಸಪ್ಲೈ” ಎಂಬ ಹೆಸರಿನಲ್ಲಿ ಎಲ್ಲಾ ಹೊರೆ ಜನರ ಮೇಲೇ ಹಾಕಬೇಡಿ. ಸಮಾಜದ ಹೊಣೆಗಾರಿಕೆ, ಇದು ಒಬ್ಬರ ಸಮಸ್ಯೆ ಅಲ್ಲ.

ಇದು ಇಡೀ ಸಮಾಜದ ಸಂಕಷ್ಟ. ನಾವು ಧ್ವನಿ ಎತ್ತಬೇಕಾ?, ಅಥವಾ ಮೌನವಾಗಿ ಭರಿಸಬೇಕಾ?, ನಿಮಗೂ ಈ ಅನುಭವ ಆಗಿದೆಯಾ? ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ……
ಲೇಖನ:ಶ್ರೀನಿವಾಸ್ ಕೆ ಟಿ, ಬೆಂಗಳೂರು.

