ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೇಸಿಗೆಯಲ್ಲಿ ಬೆಂಗಳೂರಿನ ಜನತೆ ಹನಿ ನೀರಿಗೂ ಹಾಹಾಕಾರ ಪಡುತ್ತಿದ್ದಾಗ ಕದ್ದು ಮುಚ್ಚಿ ಕಾವೇರಿಯನ್ನು ತಮಿಳುನಾಡಿಗೆ ಹರಿಸಿದ್ದಾಯ್ತು. ನಂತರ ಟ್ಯಾಂಕರ್ ಮಾಫಿಯಾ ಮೂಲಕ ಜನರನ್ನ ಸುಲಿಗೆ ಮಾಡಿದ್ದಾಯ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಈಗ ನೀರಿನ ದರ ಏರಿಸುವ ಮೂಲಕ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಡಲು ಹೊರಟಿದೆ ಈ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್ ಸರ್ಕಾರ. ಸ್ವಾಮಿ ಡಿಸಿಎಂ ಶಿವಕುಮಾರ್ ಅವರೇ, ನಿಮ್ಮ ಸಹೋದರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಬೆಂಗಳೂರಿನ ಜನತೆ ‘ಉಪಕಾರ ಸ್ಮರಣೆ‘ ಇಲ್ಲದವರು ಎಂದು ನಿಂದನೆ ಮಾಡುತ್ತೀರಿ.
ಜಯನಗರದ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಯಾಕಿಲ್ಲ ಅಂದರೆ ಚುನಾಯಿತ ಶಾಸಕರು ತಗ್ಗಿ-ಬಗ್ಗಿ ನಡೆಯಲಿಲ್ಲ ಎನ್ನುತ್ತೀರಿ. ಬೆಂಗಳೂರಿನ ಜನತೆಯ ಮೇಲೆ ತಮಗೆ ಯಾಕಿಷ್ಟು ಕೋಪ? ಯಾಕಿಷ್ಟು ದ್ವೇಷ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

