ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕಸ ವಿಲೇವಾರಿ ಮಾಡುವಲ್ಲಿ ವಿಫಲವಾಗಿ, ಸಿಲಿಕಾನ್ ಸಿಟಿಯನ್ನು ಗಾರ್ಬೇಜ್‌ಸಿಟಿ ಮಾಡಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಕಸ ಸಂಗ್ರಹಣೆಗೂ ಶುಲ್ಕ ಫಿಕ್ಸ್ ಮಾಡಲು ಮುಂದಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಆರೋಪಿಸಿದೆ.
ಬೆಂಗಳೂರು ಸಿಟಿಯನ್ನು ಕಸಮುಕ್ತ ಸಿಟಿಯನ್ನಾಗಿಸುವುದಾಗಿ ಹೇಳಿ ಕಸ ವಿಲೇವಾರಿ ಹೆಸರಲ್ಲಿ ಬೊಕ್ಕಸ ತುಂಬಿಸಿಕೊಳ್ಳಲು ನಿರ್ಧರಿಸಿದಂತಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಬ್ರ್ಯಾಂಡ್ ಬೆಂಗಳೂರಿನ ಹೆಸರಿನಲ್ಲಿ ದರೋಡೆ ಮಾಡಿ ಆಯಿತು,ಈಗ ಕಸದ ಹೆಸರಿನಲ್ಲೂ ಲೂಟಿಯಾ? ಇದು ಮಹಾರಾಷ್ಟ್ರ ಚುನಾವಣಾ ಖರ್ಚಿಗೋ, ಜಾರ್ಖಂಡ್ ಚುನಾವಣಾ ಖರ್ಚನ್ನು ಸರಿದೂಗಿಸಲೋ ? ಎಂದು ಬಿಜೆಪಿ ವ್ಯಂಗ್ಯವಾಡಿದೆ.