ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತರ ಹೆಸರಲ್ಲಿ ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಂದ ಹಗಲು ದರೋಡೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಹಾಲು ಉತ್ಪಾದನೆ ಹೆಚ್ಚಳ ಆಗಿದೆ ಎಂದು ಊಸರವಳ್ಳಿ ನಾಟಕ ಮಾಡಿ ದರ ಹೆಚ್ಚಿಸಿದ್ದ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ, ಇದೀಗ 50ml ಹಾಲನ್ನು ಕಡಿತಗೊಳಿಸಿ 5 ದರ ಏರಿಕೆ ಮಾಡಿದೆ ಎಂದು ಬಿಜೆಪಿ ದೂರಿದೆ.
ಹೊಸ ವರ್ಷಕ್ಕೆ ಜನರಿಗೆ ಸಿಹಿ ಸುದ್ಧಿ ನೀಡಬೇಕಾದ ಸರ್ಕಾರ, ಸಂಕ್ರಾಂತಿಗೆ ಕಹಿ ಕೊಟ್ಟು ತಾನು ಮಾತ್ರ ಬೆಲ್ಲ ತಿನ್ನುತ್ತಿದೆ ಕಾಂಗ್ರೆಸ್ ಎಂದು ಬಿಜೆಪಿ ಕಿಡಿಕಾರಿದೆ.