ಕೃಷಿ ಪಂಪ್ ಸೆಟ್ ಸಬ್ಸಿಡಿ ಪಡೆಯುವ ರೈತರ ಮೇಲೆ ಬಿದ್ದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾಯ್ತು
, ಈಗ ಕೃಷಿ ಪಂಪ್ ಸೆಟ್ ಸಬ್ಸಿಡಿ ಪಡೆಯುತ್ತಿರುವ ರೈತರ ಮೇಲೆ ಬಿದ್ದಿದೆ ಈ ದರಿದ್ರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮಗೆ ಹಣಕಾಸು ನಿರ್ವಹಣೆ ಮಾಡಲು ಕೈಲಾಗದಿದ್ದಾರೆ ರಾಜೀನಾಮೆ ಕೊಟ್ಟು ನಿರ್ಗಮಿಸಿ. ದುಡ್ಡು ಉಳಿಸುವ ನೆಪದಲ್ಲಿ ಅನ್ನದಾತರಿಗೆ ಸಿಗುತ್ತಿರುವ ಸಬ್ಸಿಡಿಗೆ ಕತ್ತರಿ ಹಾಕುವ ಪಾಪದ ಕೆಲಸ ಮಾಡಬೇಡಿ ಎಂದು ಅಶೋಕ್ ಆಗ್ರಹಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";