ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಚಿತ ಉಚಿತ ಎನ್ನುತ್ತಲೇ ಕರೆಂಟ್ ಬಿಲ್ ಬೆಲೆ ಗಗನಕ್ಕೇರಿಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಶಾಕ್ ಕೊಟ್ಟಿದೆ ಎಂದು ಜೆಡಿಎಸ್ ಆರೋಪಿಸಿದೆ.
ರಾಜ್ಯದ ಜನರಿಗೆ ಫ್ರೀ ಕರೆಂಟ್ ಎಂದು ಸುಳ್ಳುಹೇಳಿ ಅಧಿಕಾರಕ್ಕೆ ಬಂದ ತಕ್ಷಣವೇ ಕರೆಂಟ್ ಬಿಲ್ ಏರಿಸಿತ್ತು ಕಾಂಗ್ರೆಸ್‌ಸರ್ಕಾರ. ಈಗ ರಾಜ್ಯದ ಜನರಿಗೆ 2ನೇ ಬಾರಿ ಕರೆಂಟ್‌ಶಾಕ್‌ಟ್ರಿಟ್‌ಮೆಂಟ್‌ಕೊಡಲು ರೆಡಿಯಾಗಿದೆ.
ಬಸ್ ದರ , ಮೆಟ್ರೋ ರೈಲು ಬಳಿಕ ವಿದ್ಯುತ್ ದರ ಏರಿಸಲು ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಸಂಚು ಮಾಡಿದೆ. ಬೆಂಗಳೂರಿನಲ್ಲಿ ಕಾವೇರಿ ನೀರಿನ ದರವೂ ಶೀಘ್ರದಲ್ಲೇ ಹೆಚ್ಚಳವಾಗುವುದು ಗ್ಯಾರಂಟಿಯಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

