ಬೇರೆ ಸಮಾಜ ಓಲೈಸಲು ಎಸ್‌ಟಿ ಕುಟುಂಬದ ಮೇಲೆ ಎಫ್‌ಐಆರ್‌ ದಾಖಲಿಸಿ, ದ್ವೇಷ ಸಾಧಿಸುತ್ತಿರುವ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ಸಮುದಾಯವನ್ನು ಓಲೈಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಹತ್ಯೆಯಾದ ಎಸ್‌ಟಿ ಸಮುದಾಯದ ಗವಿಸಿದ್ದಪ್ಪ ನಾಯಕ ಕುಟುಂಬದ ಮೇಲೆ ಎಫ್‌ಐಆರ್‌ ದಾಖಲಿಸಿ, ದ್ವೇಷ ಸಾಧಿಸುತ್ತಿದ್ದರೂ ಎಸ್‌ಟಿ ಸಮುದಾಯದ ಸಚಿವರು ಹಾಗೂ ನಾಯಕರು ಮಾತನಾಡದಿರುವುದು ನಾಚಿಕೆಗೇಡಿನ ಸಂಗತಿ.! ಎಂದು ಬಿಜೆಪಿ ಟೀಕಿಸಿದೆ.

ಏಕಾಏಕಿ ಪೋಕ್ಸೋ ಕೇಸ್‌ದಾಖಲಿಸಿದ್ದಲ್ಲದೇ ಮೃತ ಗವಿಸಿದ್ದಪ್ಪ ನಾಯಕ ಎ1, ತಂದೆ ಎ2, ತಾಯಿ 3 ಹಾಗೂ ತಂಗಿಯನ್ನು ಎ4 ಆರೋಪಿಗಳನ್ನಾಗಿ ಮಾಡಿರುವ ಹಿಂದಿನ ಉದ್ದೇಶವೇನು.? ಅಲ್ಲದೇ ಕೇಸ್ ದಾಖಲಿಸಲು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತಂದ ಕಾಣದ ಕೈ ಆದರೂ ಯಾವುದು? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

- Advertisement - 

ವಾಲ್ಮೀಕಿ ಸಮಾಜದ ಸಚಿವರು, ಮುಖಂಡರಾದ ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ, ಕೆ.ಎನ್.ರಾಜಣ್ಣ ಅವರೇ, ನಿಮ್ಮದೇ ಸಮುದಾಯದ ಬಡಕುಟುಂಬ ಅನ್ಯಾಯ, ದೌರ್ಜನ್ಯಕ್ಕೆ ಒಳಗಾಗಿ ಪರಿತಪಿಸುತ್ತಿದ್ದರೂ ಮೌನವಾಗಿರುವುದು ಯಾಕೆ.? ಸಮುದಾಯದಿಂದ ಸ್ಥಾನಮಾನ ಪಡೆದು ಬಾಯಿಗೆ ಬೀಗ ಹಾಕಿಕೊಂಡಿರುವುದು ಸಮಾಜಕ್ಕೆ ಬಗೆದ ದ್ರೋಹವಲ್ಲವೇ.? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.

 

- Advertisement - 

 

Share This Article
error: Content is protected !!
";