ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಸಿರು ಸೆಸ್ ನೆಪದಲ್ಲಿ ಹೊಸ ಸುಲಿಗೆ! ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕರೆಂಟ್ ಬಿಲ್ಲು ಗಗನಕ್ಕೇರಿಸಿದ್ದಾಯ್ತು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಯ್ತು ಆಸ್ತಿ ನೋಂದಣಿ ದರ ಹೆಚ್ಚಾಯ್ತು, ಮುದ್ರಾಂಕ ದರವೂ ದುಬಾರಿ ಆಯ್ತು
ಜನನ-ಮರಣ ಪ್ರಮಾಣ ಪತ್ರದ ಶುಲ್ಕವನ್ನೂ ಏರಿಸಿದ್ದಾಯ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಇಷ್ಟು ಸಾಲದು ಅಂತ ಈಗ ಕುಡಿಯುವ ನೀರಿನ ಬಿಲ್ ಮೇಲೂ ಗ್ರೀನ್ ಸೆಸ್ ಹೆಸರಿನಲ್ಲಿ ಸುಲಿಗೆ ಮಾಡಲು ಹೊರಟಿದೆ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ.
ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದ ಕರ್ಮಕ್ಕೆ ಕನ್ನಡಿಗರು ಇನ್ನೆಷ್ಟು ದಂಡ ತೆತ್ತಬೇಕೋ ಗೊತ್ತಿಲ್ಲ ಎಂದು ಅವರು ಕಾಂಗ್ರೆಸ್ ಲೂಟ್ಸ್ ಕರ್ನಾಟಕ ಎಂದು ಟ್ಯಾಗ್ ಲೈನ್ ಹಾಕಿ ಟೀಕಿಸಿದ್ದಾರೆ.