ಶಾಸಕ ಭರತ್‌ರೆಡ್ಡಿ ಬೆನ್ನಿಗೆ ನಿಂತ ಸರ್ಕಾರ- ಕುಮಾರಸ್ವಾಮಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಾಳಿಯಲ್ಲಿ ಗುಂಡು ಹಾರಿಸಿದಾಗ ಎಡವಟ್ಟು ಎನ್ನುವ ಸಿಎಂ
, ಭರತ್‌ರೆಡ್ಡಿ ಬೆನ್ನಿಗೆ ನಿಲ್ಲುತ್ತೇವೆ ಎಂದು ಸ್ವತಃ ಡಿಸಿಎಂ ಡಿಕೆಶಿ ಹೇಳಿದ ಮೇಲೆ ಯಾವ ತನಿಖೆ ನಡೆಸುತ್ತೀರಿ ಗೃಹ ಸಚಿವರೇ ? ಎಂದು ಕೇಂದ್ರ ಬೃಹತ್‌ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಶಾಸಕ ಭರತ್‌ರೆಡ್ಡಿ ಬೆಂಬಲಿಗರು, ಅತಿಕ್ರಮ ಪ್ರವೇಶ ಮಾಡಿ, ಗುಂಡು ಹಾರಿಸಿ ಗೂಂಡಾಗಿರಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಸರ್ಕಾರ, ಪೊಲೀಸ್‌ಇಲಾಖೆ ಸತ್ತು ಹೋಗಿದೆಯೇ ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

- Advertisement - 

ಕಾಂಗ್ರೆಸ್‌ಸರ್ಕಾರ ರಾಜ್ಯದ ಜನರಲ್ಲಿ ಭಯದ ವಾತವರಣ ಸೃಷ್ಟಿಸಿರುವುದಕ್ಕೆ ಬಳ್ಳಾರಿ ಘಟನೆಯೇ ಸಾಕ್ಷಿ ಜನವರಿ 3ಕ್ಕೆ ವಾಲ್ಮೀಕಿ ಪ್ರತಿಮೆ ಅನಾವರಣ ಮಾಡಲು ಸಿದ್ದರಾಮಯ್ಯ ಅನುಮತಿಯನ್ನೇ ಕೊಟ್ಟಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

 

- Advertisement - 

 

Share This Article
error: Content is protected !!
";