ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರವಣ ಸಾಧನಗಳ ಅಭಿವೃದ್ಧಿಗೆ ಡೆನ್ಮಾರ್ಕ್ ನ WS ಆಡಿಯಾಲಜಿಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಭಾರತದಲ್ಲಿ ಶ್ರವಣ ಸಾಧನಗಳ ಉತ್ಪಾದನಾ ಘಟಕವನ್ನು ಮೊಟ್ಟ ಮೊದಲ ಬಾರಿ ಬೆಂಗಳೂರಿನಲ್ಲಿ ಸ್ಥಾಪಿಸಿದ ಡೆನ್ಮಾರ್ಕ್ ಮೂಲದ #WSAudiology ಸಂಸ್ಥೆಯ ಪ್ರತಿನಿಧಿಗಳನ್ನು ಕರ್ನಾಟಕ ಸರ್ಕಾರದ ನಿಯೋಗವು ಡೆನ್ಮಾರ್ಕ್‌ನಲ್ಲಿ ಭೇಟಿ ಮಾಡಿ ಚರ್ಚಿಸಿದೆ.
ನಮ್ಮ ಸರ್ಕಾರವು ಸಂಸ್ಥೆಯ ಪ್ರಸ್ತುತ ಹೂಡಿಕೆಗಳಿಗೆ ಬೆಂಬಲ ಹಾಗೂ ಉತ್ತೇಜನ ನೀಡುತ್ತಿದೆ. ಕಂಪನಿಯು ತಮ್ಮ ಕಾರ್ಯಕ್ಷೇತ್ರವನ್ನು ಕರ್ನಾಟಕದಲ್ಲಿ ಮತ್ತಷ್ಟು ವಿಸ್ತರಿಸುವಂತೆ ಪ್ರೋತ್ಸಾಹಿಸಲಾಯಿತು. ಈ ವೇಳೆ, ಕಡಿಮೆ ದರದ ಶ್ರವಣ ಸಾಧನಗಳನ್ನು ಅಭಿವೃದ್ಧಿಪಡಿಸಲು ಸಲಹೆ ನೀಡಿದೆ ಎಂದು ಸಚಿವರು ತಿಳಿಸಿದರು.
ಶ್ರವಣ ಸಾಧನಗಳ ಲಭ್ಯತೆ ಮತ್ತು ಪರವಾನಗಿಯನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಸಾರ್ವಜನಿಕ ಯೋಜನೆಗಳ ಮೂಲಕ ಜತೆಗೂಡಿ ಕೆಲಸ ಮಾಡಬೇಕಾಗಿದೆ ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು.
ಕಂಪನಿಯು ತಮ್ಮ ಅತ್ಯಾಧುನಿಕ, ಸ್ವಯಂಚಾಲಿತ ಉತ್ಪಾದನಾ ಸೌಲಭ್ಯವನ್ನು ಪ್ರದರ್ಶಿಸಿ, ಭವಿಷ್ಯದ ಯೋಜನೆಗಳು ಮತ್ತು ಉದ್ದೇಶಗಳನ್ನು ಹಂಚಿಕೊಂಡಿತು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.