ಚಂದ್ರವಳ್ಳಿ ನ್ಯೂಸ್, ಬೆಂಗಳೂರು
“ಕರುನಾಡ ಪರಂಪರೆಗೆ ಬಹುದೊಡ್ಡ ಕೊಡುಗೆ ಕೊಟ್ಟ ಶ್ರೇಷ್ಠ ಸಮಾಜ ಬಂಜಾರ ಸಮುದಾಯ” ಎಂದು ಬಿ ವೈ ವಿಜಯೇಂದ್ರ ಹೇಳಿದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ದಾವಣಗೆರೆಯಲ್ಲಿ ಆಯೋಜಿಸಿದ್ದ ಬಂಜಾರ ಸಮಾಜದ ಶ್ರೇಷ್ಠ ಸಂತ, ದಾರ್ಶನಿಕ, ಸಂತ ಶ್ರೀ ಸೇವಾಲಾಲ ಮಹಾರಾಜರ 286 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೌಢ್ಯ-ಕಂದಾಚಾರಗಳಿಗೆ ಬಲಿಯಾಗದೆ, ಪ್ರಕೃತಿಯನ್ನು ಪೋಷಿಸಿ ಆರಾಧಿಸಲು ಕರೆ ನೀಡಿದ್ದ ಮಹಾತಪಸ್ವಿ ಸಂತ ಶ್ರೀ ಸೇವಾಲಾಲ ಮಹಾರಾಜರ ತತ್ವಗಳು ಹಾಗೂ ಅಮೂಲ್ಯಯುತ ಜೀವನ ಸಂದೇಶಗಳು ನಿತ್ಯ ನಿರಂತರ ಪ್ರೇರಣೆ ಎಂದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲಸಂರಕ್ಷಣಾ ಸಚಿವರಾದ ಸಂಜೀವ್ ರಾಥೋಡ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾಜಿ ಶಾಸಕರಾದ ಪಿ.ರಾಜೀವ್, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ನಿಗಮದ ಅಧ್ಯಕ್ಷರಾದ ಎನ್.ಜಯದೇವನಾಯ್ಕ, ಜಿಲ್ಲೆಯ ಶಾಸಕರು, ಸಮುದಾಯದ ಪ್ರಮುಖರು, ನಿಗಮದ ಅಧಿಕಾರಿಗಳು, ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.