ಸರ್ಕಾರದ ಅಚಾತುರ್ಯಕ್ಕೆ ಪೊಲೀಸ್ ಅಧಿಕಾರಿಗಳ ತಲೆದಂಡ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೋತಿ ಮೊಸರು ತಿಂದು ಮೇಕೆ ಬಾಯಿಗೆ ವರೆಸಿತು” ಇಂತಹ ಘನ ಕಾರ್ಯವನ್ನು  ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಜೆಡಿಎಸ್ ಟೀಕಿಸಿದೆ.

- Advertisement - 

ಫೋಟೋ ಸೆಷನ್ ನಡೆಸಿ ಸಂಭ್ರಮಿಸಿದ್ದು ಸಿಎಂ‌, ಸಿಎಂ ಮೊಮ್ಮಕ್ಕಳು, ಡಿಸಿಎಂ, ಸಚಿವರು, ಅವರ ಮಕ್ಕಳು, ಆಡಳಿತ ಪಕ್ಷದ ಶಾಸಕರು, ಅವರ ಕುಟುಂಬದವರು ಹಾಗೂ ಅಧಿಕಾರಿಗಳು.

- Advertisement - 

 ಆದರೆ, ಶಿಕ್ಷೆ ಮಾತ್ರ ಬೆಂಗಳೂರು ಪೊಲೀಸ್ ಕಮಿಷನರ್ಗೆ. ಸರ್ಕಾರ ಮಾಡಿರುವ ಅಚಾತುರ್ಯಕ್ಕೆ ಪೊಲೀಸ್ ಅಧಿಕಾರಿಗಳ ತಲೆದಂಡ ! ಇದು ಯಾವ ನ್ಯಾಯ?

ದುರಂತಕ್ಕೆ ಪ್ರಮುಖ ಕಾರಣರಾದ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ ಅವರನ್ನು ಸಂಪುಟದಿಂದ ಹೊರಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ನಿಮ್ಮ ನೈತಿಕತೆಯನ್ನು ಉಳಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮಂತಹ ಕಟುಕರು , ಪಾಪ ಪ್ರಜ್ಞೆ ಇಲ್ಲದವರು ರಾಜಕಾರಣಕ್ಕೆ ಕಪ್ಪು ಚುಕ್ಕೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

- Advertisement - 

 

Share This Article
error: Content is protected !!
";