ವೈದ್ಯರ ವಿಲೀನ ಪ್ರಕ್ರಿಯೆಗೆ ಕೈ ಹಾಕಿದ ಆರೋಗ್ಯ ಇಲಾಖೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ 270 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ವೈದ್ಯರನ್ನು ತಾಲೂಕು ಆಸ್ಫತ್ರೆಗೆ ಸ್ಥಳಾಂತರಿಸುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿ ವೈದ್ಯರ ವಿಲೀನ ಪ್ರಕ್ರಿಯೆ ಆರಂಭಿಸಲು ಯೋಜನೆ​​ ಮಾಡಲಾಗುತ್ತಿದೆ.

ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಆ ಮೂಲಕ ಆರೋಗ್ಯ ಇಲಾಖೆ ಬಿಗ್ ಶಾಕ್ ನೀಡಿದೆ. ಕರ್ನಾಟಕದಲ್ಲಿ ಸುಮಾರು 270ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳಿವೆ. ಈ ಆಸ್ಫತ್ರೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯಕೀಯ ಸೇವೆಗಳು ಸಿಗುತ್ತಿವೆ. ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತಿತ್ತು.

- Advertisement - 

ಆದರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆ ಆಗುತ್ತಿವೆ. ಯಾವ ಆಸ್ಫತ್ರೆಗಳಲ್ಲಿ 30ಕ್ಕಿಂತ ಕಡಿಮೆ ಹೆರಿಗೆ ಆಗಿವೆ ಅಂತಹ ಆಸ್ಫತ್ರೆಗಳಲ್ಲಿ ಅನಸ್ತೇಶಿಯಾ ವೈದ್ಯರು, ಮಕ್ಕಳ ವೈದ್ಯರು ಮತ್ತು ಹೆರಿಗೆ ವೈದ್ಯರನ್ನು ತಾಲೂಕು ಆಸ್ಫತ್ರೆಗಳಿಗೆ ಸ್ಥಳಾಂತರ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಈಗಾಗಲೇ ಎಲ್ಲಾ ಆಸ್ಪತ್ರೆಗಳ ತಿಂಗಳ ಹೆರಿಗೆಯಾಗುವ ವರದಿ ಸಿದ್ಧಪಡಸಿ ವೈದ್ಯರ ಶಿಫ್ಟ್​ಗೆ ಆರೋಗ್ಯ ಇಲಾಖೆ ಮುಂದಾಗಿದೆ. ಹೀಗಾಗಿ ಇನ್ಮುಂದೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ವೈದ್ಯರು, ಹೆರಿಗೆ ವೈದ್ಯರು, ಅನಸ್ತೇಶಿಯಾ ವೈದ್ಯರು ಸಿಗುವುದು ಅನುಮಾನ ಎನ್ನುವ ಚರ್ಚೆ ಮತ್ತು ಆತಂಕ ವ್ಯಕ್ತವಾಗುತ್ತಿದೆ.

- Advertisement - 

ರಾಜ್ಯದಲ್ಲಿ ಕಡಿಮೆ ಹೆರಿಗೆಯಾಗುವ ಆಸ್ಪತ್ರೆಗಳ ಪಟ್ಟಿಯನ್ನು ಆರೋಗ್ಯ ಇಲಾಖೆ ಈಗಾಗಲೇ ಸಿದ್ಧಪಡಿಸಿದೆ. ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಜಿಸ್ಟ್​​, ಜನರಲ್ ಮೆಡಿಸಿನ್ ವೈದ್ಯರು ಪಟ್ಟಿಯಲ್ಲಿದ್ದಾರೆ.
ಆ ಮೂಲಕ ಕಡಿಮೆ ಕಾರ್ಯಕ್ಷಮತೆಯ ಆಸ್ಪತ್ರೆಯಿಂದ ವೈದ್ಯರ ಎತ್ತಗಂಡಿಗೆ ಮುಂದಾಗಿದೆ.
270 ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರನ್ನು ತಾಲೂಕು ಆಸ್ಫತ್ರೆಗಳಿಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗುತ್ತಿದೆ.

 

Share This Article
error: Content is protected !!
";