ಪತ್ರಿಕಾ ರಂಗದ ಹೃದಯ ಪತ್ರಿಕಾ ವಿತರಕರು: ಡಿ.ಎಸ್.ಅರುಣ್

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಳೆ, ಗಾಳಿ, ಚಳಿ ಎನ್ನದೇ ಪ್ರತಿದಿನ ಬೆಳಿಗ್ಗೆ  ಪತ್ರಿಕೆಗಳನ್ನು ಓದುಗರ ಮನೆಗೆ ತಲುಪಿಸುವ ಇವರ ವೃತ್ತಿ ಪತ್ರಿಕಾ ರಂಗದ ಹೃದಯ ಎಂದರೆ ತಪ್ಪಗಲಾರದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.

ಅವರು ನಗರದಲ್ಲಿ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪತ್ರಿಕಾ ವಿತರಕರ ಉತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಪತ್ರಿಕಾ ವಿತರಕರಿಗೆ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಎರಡು ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಅದನ್ನು ವಿತರಕರು ಮತ್ತು ಅವರ ಕುಟುಂಬದವರಿಗೆ ಸದ್ಬಳಕೆ ಆಗಬೇಕಿದೆ. ಆ ನಿಟ್ಟಿನಲ್ಲಿ ವಿತರಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಂತ್ರಜ್ಞಾನ ಮುಂದಿವರಿದಿದೆ.

ಕ್ಷಣಾರ್ಧದಲ್ಲಿ ದೇಶ, ವಿದೇಶಗಳ ಮಾಹಿತಿಗಳು ಲಭಿಸಿದರೂ ನಾವು ಪ್ರತಿಕೆಗಳಲ್ಲಿ ದಿನನಿತ್ಯದ ಸುದ್ದಿ ಓದುವುದು ಅವಶ್ಯಕ. ಇದಕ್ಕೆ ಕೊಂಡಿಯಾಗಿರುವ ವಿತರಕರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಉಂಟಾದಾಗ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕಿತ್ಸೆಗೂ ಹಣಕಾಸಿನ ತೊಂದರೆಗಳನ್ನು ಎದುರಿಸುವರು. ಹಾಗಾಗಿ ವಿತರಕರನ್ನು ಆರೋಗ್ಯ ವಿಮೆ ವ್ಯಾಪ್ತಿಗೆ ಸರ್ಕಾರ ತರಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರ ಉತ್ಸವ ಅದ್ದೂರಿಯಾಗಿ ನೆರವೇರಿತು. ನಗರದ ನೆಹರು ರಸ್ತೆ ಗಾಂಧಿ ಭವನದಲ್ಲಿ ವರ್ಷಾಂತ್ಯದ  ವಿತರಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಕುಟುಂಬ ವರ್ಗದೊಂದಿಗೆ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಬೆಳಗಿನ ಜಾವ ಪತ್ರಿಕೆಗಳನ್ನು ಜೋಡಿಸಿ ಪ್ಯಾಕ್ ಮಾಡಿಕೊಂಡು ಓದುಗರ ಮನೆ ಮನೆಗೆ ತಲುಪಿಸುವ ವಿತರಕರು ಗಾಂಧಿಭವನದಲ್ಲಿ ಕುಣಿದು ಕುಪ್ಪಳಿಸಿದರು. ವಿವಿಧ ಕ್ರೀಡೆಗಳಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದು ವಿತರಕರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಎನ್.ಮಾಲತೇಶ್ ವಹಿಸಿದ್ದರು.

ಹಿರಿಯ ಪತ್ರಕರ್ತರಿಗೆ ಸನ್ಮಾನ:
ಹಿರಿಯ ಪತ್ರಿಕರ್ತರಾದ ನ.ರಾ.ವೆಂಕಟೇಶ್, ವಿಜಯ ವಾಣಿ ಸ್ಥಾನಿಕ ಸಂಪಾದಕರ ಚಂದ್ರಶೇಖರ್, ಭಂಡಿಗಡಿ ನಂಜುಂಡಪ್ಪ, ರವೀಂದ್ರ ನಾಥ್ (ಬ್ರದರ್)ನವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ :
 ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಖಾರ್ ಅಹಮದ್(ನಜೀರ್), ಸೀತಾರಾಮ್ ದೇವರಾಜ್ ಶೆಟ್ಟಿ, ತೀರ್ಥಹಳ್ಳಿಯ ನಾಗಭೂಷಣ್, ಶಿಕಾರಿಪುರದ ಹುಲಿಗಿ ಕೃಷ್ಣ, ಭದ್ರಾವತಿ ಜಿ.ಐ.ಮಲ್ಲಿಕಾರ್ಜುನ, ಸೋಮಶೇಖರ್ ಅರಳಿಹಳ್ಳಿ, ವಿನಯ್ ಕುಮಾರ್ ಎಸ್. ವಾಲಿ, ಶಿರಾಳಕೊಪ್ಪದ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ಉತ್ಸವದ ಆರಂಭಕ್ಕೂ ಮುನ್ನ ಇತ್ತೀಚೆಗೆ ಅಗಲಿದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತಿ ಎಸ್.ಎಂ.ಕೃಷ್ಣ, ಹುತಾತ್ಮರಾದ ಐವರು ಸೈನಿಕರ ಗೌರವಾರ್ಥ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ, ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷ ಕಿರಣ್‌ಕುಮಾರ್, ಒಕ್ಕೂಟದ ಉಪಾಧ್ಯಕ್ಷ ಜಿ.ರಾಮು, ಸಂಘಟನಾ ಕಾರ್ಯದರ್ಶಿ ಪರಶುರಾಮ ರಾವ್, ಖಜಾಂಚಿ ಟಿ.ಮಧು, ಪ್ರಾಣೇಶ್, ದುರ್ಗೋಜಿ, ಪ್ರಶಾಂತ್, ಕೆ.ರಾಜವರ್ಮ ಜೈನ್, ರಾಜಕುಮಾರ್, ಮಂಜುನಾಥ್ ಹೆಚ್.ಆರ್, ಶ್ರೀನಿವಾಸ್, ಹರ್ಷ, ಪ್ರಶಾಂತ್, ಜಗ್ಗ, ಪ್ರಾಣೇಶ್ ಇತರರಿದ್ದರು.

ಸ್ಪರ್ಧಾ ವಿಜೇತರು:  ಬಕೆಟ್ ಇನ್ ದ ಬಾಲ್, ಮಕ್ಕಳ ವಿಭಾಗ: ೧.ಮೋಹನ್, ೨. ಅಪೂರ್ವಾ, ೩. ವಿಜಯ, ರಾಜ್ ಮಹಿಳಾ ವಿಭಾಗ: ೧. ಚೈತ್ರಾ ೨. ಗೀತಾ, ಪುರುಷರು: ೧.ಜಿ.ರಾಮು, ೨. ಮಾಲತೇಶ್, ೩. ಮಲ್ಲಿಕಾರ್ಜುನ, ಮ್ಯೂಸಿಕಲ್ ಚೇರ್ : ಮಕ್ಕಳ ವಿಭಾಗ: ೧.ವಿಕ್ರನ್, ೨.ಜನನಿ, ೩.ಸಂಪ್ರೀತ್, ಮಹಿಳೆಯರು: ೧.ಕೋಮಲಾ ಚಂದ್ರಶೇಖರ ೨.ಕವಿತಾ, ೩. ಚೈತ್ರಾ ಪುರುಷರು: ೧.ಸಿ.ಆರ್.ಪುಟ್ಟಣ್ಣ,

೨.ಟಿ.ಡಿ.ಜಗದೀಶ್೩.ಚಿಕ್ಕಮಗಳೂರಿನ ಅಭಿಲಾಷ್ಹಿಟ್ಟಿಂಗ್ ದ ಪಾಟ್ ೧.ವಿನಯ್‌ಕುಮಾರ್ ಜೈನ್ ರಾಕ್, ೨.ನಾಗಭೂಷಣ್, ೩.ಹುಲಿಗಿ ಕೃಷ್ಣ, ಬಾಂಬ್ ಇನ್ ದ ಸಿಟಿ ಮಕ್ಕಳ ವಿಭಾಗ: ೧.ವಿಜಯರಾಜ್, ೨. ವಿಕ್ರನ್, ೩.ಜನನಿ ಮಹಿಳೆಯರು: ೧.ಶಿರಾಳಕೊಪ್ಪದ ಎನ್.ಆರ್.ಗೀತಾ, ೨. ಭದ್ರಾವತಿ ಹೀಬೋನಿ, ೩. ಭದ್ರಾವತಿ ಕವಿತಾ ಪುರುಷರು: ೧.ಮಲ್ಲಿಕಾರ್ಜುನ, ೨.ರಾಘವೇಂದ್ರ, ೩.ಸೋಮಶೇಖರ್ ಕ್ರೀಡೆಯನ್ನು ರಾಮಚಂದ್ರ ಹೆಚ್.ತಿಮ್ಮಹಳ್ಳಿ, ಲೋಕೇಶ್, ಕುಮಾರ್‌ಸ್ವಾಮಿ ನಡೆಸಿಕೊಟ್ಟರು.

 

- Advertisement -  - Advertisement - 
Share This Article
error: Content is protected !!
";