ದೇವರ ಹುಂಡಿಗೆ ಕೈ ಹಾಕಿ ಪಾಪದ ಕೆಲಸ ಮಾಡಿದ ಹಿಮಾಚಲ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾರ್ಥಕ್ಕಾಗಿ ಅಂಗೈನಲ್ಲಿ ಆಕಾಶ ತೋರಿಸಿ, ಜನರ ಕಣ್ಣಿಗೆ ಮಂಕುಬೂದಿ ಎರಚಿ ಅಧಿಕಾರ ಹಿಡಿದ ಹಿಮಾಚಲ ಕಾಂಗ್ರೆಸ್ ಸರ್ಕಾರ ದಿವಾಳಿಯತ್ತ ಸಾಗಿದೆ. ಶಾಸಕರು, ಸಚಿವರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲದೆ ದೇವರ ಹುಂಡಿಗೆ ಕೈ ಹಾಕುವ ಪಾಪದ ಕೆಲಸ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲೂ ಆರ್ಥಿಕ ಸ್ಥಿತಿ ಬಿಗಾಡಾಯಿಸಿದ್ದು, ಸರ್ಕಾರ ಐಸಿಯು ಅಲ್ಲಿದೆ! ಅವೈಜ್ಞಾನಿಕ ಗ್ಯಾರಂಟಿಗಳಿಂದ ಹಿಮಾಚಲ ಪ್ರದೇಶವನ್ನು ದಿವಾಳಿಯಂಚಿಗೆ ತಳ್ಳಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತಿರುವಾಗ ಅದೇ ಹಾದಿಯಲ್ಲಿ ಸಾಗುತ್ತಿರುವ ಸಿಎಂ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನ ಅಧೋಗತಿಗೆ ತಳ್ಳುತ್ತಿದ್ದು, ಕರ್ನಾಟಕವೂ ಶೀಘ್ರದಲ್ಲೇ ದಿವಾಳಿ ಆಗಲಿದೆ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.

 

Share This Article
error: Content is protected !!
";