ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಂದಿ ಹೇರಿಕೆ ಎಂದು ಪುಂಗಿ ಊದುವ ಇಂಡಿ ಮೈತ್ರಿಕೂಟದ ದಕ್ಷಿಣ ಭಾರತದ ರಾಜ್ಯಗಳು ವಿಷಯಾಂತರ ಮಾಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬ್ರೇಕ್‌ಹಾಕಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರು ದಕ್ಷಿಣ ಭಾರತ ರಾಜ್ಯಗಳ ಜತೆ ಸ್ಥಳೀಯ ಭಾಷೆಯಲ್ಲಿಯೇ ಗೃಹ ಇಲಾಖೆ ಪತ್ರ ವ್ಯವಹಾರ ಮಾಡಲಿದೆ ಎಂದು ಹೇಳಿದ್ದಾರೆ. ಕರ್ನಾಟಕದ ಜತೆ ಸಂವಹನ ಮಾಡುವಾಗ ಕನ್ನಡದಲ್ಲಿಯೇ ಪತ್ರ ವ್ಯವಹಾರವನ್ನು ಗೃಹ ಇಲಾಖೆ ಮಾಡಲಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇನ್ನಾದರೂ ಕರ್ನಾಟಕ ಕಾಂಗ್ರೆಸ್ ಹಿಂದಿ ಹೇರಿಕೆ ಎಂದು ಕೇಂದ್ರ ಸರ್ಕಾರವನ್ನು ದೂರುತ್ತಾ ಬೊಬ್ಬೆ ಹಾಕುವುದು ಬಿಟ್ಟು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕಿದೆ ಎಂದು ಬಿಜೆಪಿ ತಾಕೀತು ಮಾಡಿದೆ.