ಬೆಳಗಾವಿ ರಿಪಬ್ಲಿಕ್‌ ಬಳಿ ಇದ್ದ ಗೃಹ ಇಲಾಖೆ ಇನ್ನೂ ಗೃಹ ಸಚಿವರಿಗೆ ಬಂದಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಷತ್‌ ಸದಸ್ಯ ಸಿ.ಟಿ.ರವಿ ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಬೆಳಗಾವಿ ರಿಪಬ್ಲಿಕ್‌ ಬಳಿ ಇದ್ದ ಗೃಹ ಇಲಾಖೆ ಇನ್ನೂ ಗೃಹ ಸಚಿವ ಡಾ.ಜಿ.ಪರಮೇಶ್ವರ್
 ಅವರ ನಿಯಂತ್ರಣಕ್ಕೆ ಬಂದಂತೆ ಕಂಡುಬರುತ್ತಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಪರಿಷತ್‌ ಘಟನೆ ನಡೆದ ಕ್ಷಣದಿಂದ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವವರೆಗೆ ರಾಜ್ಯದ ಗೃಹ ಇಲಾಖೆಯು ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿಯಂತ್ರಣದಲ್ಲಿತ್ತು. ಗೃಹ ಸಚಿವರನ್ನೇ ಕತ್ತಲಲ್ಲಿಟ್ಟು ಪೊಲೀಸರು ಅನ್ಯರ ಮಾರ್ಗದರ್ಶನಗಳನ್ನು ಪಾಲಿಸುತ್ತಿದ್ದರು ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಸೇರಿದಂತೆ ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬರಲು ಅನುಮತಿಸಿದ ಸಿಪಿಐ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಈ ಮೂಲಕ ಬಿಜೆಪಿ ನಾಯಕರ ಮೇಲಿನ ರಾಜಕೀಯ ದ್ವೇಷವನ್ನು ಮುಂದುವರೆಸಿದೆ ಎಂದು ಬಿಜೆಪಿ ಟೀಕಿಸಿದೆ.

ಬಂಧಿತರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಕ್ಕೆ, ರಾತ್ರಿಯಿಡೀ ಸುತ್ತಾಡಿಸಿದ್ದಕ್ಕೆ, ಪೊಲೀಸ್‌ ಸುಪರ್ದಿಯಲ್ಲಿದ್ದಾಗಲೇ ಹಲ್ಲೆಗೊಂಡ ಕಾರಣಗಳಿಗಾಗಿ ಪೊಲೀಸರನ್ನು ಅಮಾನತುಗೊಳಿಸುವುದು ಬಿಟ್ಟು ಪ್ರತಿಪಕ್ಷ ನಾಯಕರನ್ನು ಠಾಣೆಯ ಒಳಗೆ ಬಿಟ್ಟ ಕಾರಣಕ್ಕಾಗಿ ಅಮಾನತುಗೊಳಿಸಿರುವುದು ಪ್ರತಿಪಕ್ಷಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನವಾಗಿದೆ ಎಂದು ಬಿಜೆಪಿ ಹರಿಹಾಯ್ದಿದೆ.

 

- Advertisement -  - Advertisement - 
Share This Article
error: Content is protected !!
";